‘ಬೂ.. ಬಾಯ್ಸ್‌’ ಬಾಯಿ ಮುಚ್ಚಿಸಿದ ವಾರ್ನರ್

ಬುಧವಾರ, ಜೂನ್ 19, 2019
29 °C

‘ಬೂ.. ಬಾಯ್ಸ್‌’ ಬಾಯಿ ಮುಚ್ಚಿಸಿದ ವಾರ್ನರ್

Published:
Updated:
Prajavani

ಬ್ರಿಸ್ಟಲ್: ಶನಿವಾರ ರಾತ್ರಿ ಇಲ್ಲಿ ಬ್ಯಾಟಿಂಗ್ ಆಫ್ಗಾನಿಸ್ತಾನ ತಂಡದ ಎದುರು ಆಡಲು ಕ್ರೀಡಾಂಗಣಕ್ಕಿಳಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅವರು ಪ್ರೇಕ್ಷಕರ ಗ್ಯಾಲರಿಯಿಂದ ಗೇಲಿ ಮಾತುಗಳನ್ನು ಎದುರಿಸಿದರು.

ಹೋದ ವರ್ಷ ‘ಸ್ಯಾಂಡ್‌ ಪೇಪರ್‌ ಗೇಟ್’ ಎಂದೇ ಕರೆಯಲಾಗುವ ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಇಬ್ಬರೂ  ಆಡಿದ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿತ್ತು. ಅಫ್ಗಾನಿಸ್ತಾನ ಬ್ಯಾಟಿಂಗ್ ಮಾಡುವಾಗ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರ ಬಗ್ಗೆಯೂ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಒಂದು ಗುಂಪು ‘ಬೂ..ಬೂ..’ ಎಂದು ನಿರಂತರವಾಗಿ ಕೂಗುತ್ತಿತ್ತು.

ಬಾಲ್ಕನಿಯಲ್ಲಿದ್ದ ಇಬ್ಬರು ಪ್ರೇಕ್ಷಕರು ಉಪ್ಪಿನ ಕಾಗದದಿಂದ ಸಿದ್ಧಗೊಳಿಸಿದ ಪೋಷಾಕನ್ನು ಸಾಂಕೇತಿಕವಾಗಿ ಧರಿಸಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾ ತಂಡದ ಶುಭಾರಂಭ

ಅಫ್ಗಾನ್ ತಂಡವು 207 ರನ್‌ ಗಳಿಸಿತು. ನಂತರ ಬ್ಯಾಟಿಂಗ್ ಮಾಡಲು ಆ್ಯರನ್ ಫಿಂಚ್ ಜೊತೆಗೆ ಡೇವಿಡ್ ವಾರ್ನರ್ ಕ್ರೀಸ್‌ಗೆ ಬಂದರು. ಆಗಲೂ ಅವರನ್ನು ಕಟುವಾದ ವ್ಯಂಗ್ಯೋಕ್ತಿಗಳಿಂದ ಜನರು ಸ್ವಾಗತಿಸಿದರು. ಆದರೆ ಇದಾವೂದಕ್ಕೂ ತಲೆಕೆಡಸಿಕೊಳ್ಳದ ವಾರ್ನರ್ ಔಟಾಗದೆ 89 ರನ್‌ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !