ಶುಕ್ರವಾರ, 3–6–1994

ಮಂಗಳವಾರ, ಜೂನ್ 25, 2019
30 °C
1994

ಶುಕ್ರವಾರ, 3–6–1994

Published:
Updated:

ಮೇರಿ ಜಾಯ್ಸ್ ಬಂಧನ– ಬಿಡುಗಡೆ

ಬೆಂಗಳೂರು, ಜೂನ್ 2– ದಿವಂಗತ ನಟಿ ದೇವಿಕಾರಾಣಿಯವರ ಆಪ್ತ ಸಹಾಯಕಿಯಾಗಿದ್ದ ಮೇರಿ ಜಾಯ್ಸ್ ಪೂಣಚ್ಚ (41) ಅವರನ್ನು ನಗರ ಅಪರಾಧ ತನಿಖಾ ದಳದ ಅಧಿಕಾರಿಗಳು ನಿನ್ನೆ ರಾತ್ರಿ ಬಂಧಿಸಿ, ಮನೆಯೊಂದರಲ್ಲಿ ಅಡಗಿಸಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪ್ರಾಚೀನ ಕಾಲದ ವಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಧರ್ಮಸ್ಥಳಕ್ಕೆ ಹೋಗಿ ಹಿಂತಿರುಗಿದ ಮೇರಿಯನ್ನು ಬಸ್‌ ನಿಲ್ದಾಣದಲ್ಲೇ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ನಿರೀಕ್ಷಣಾ ಜಾಮೀನು ಹೊಂದಿದ್ದ ಆಕೆಯನ್ನು ಇಂದು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಕಮೀಷನರ್ ಪಿ. ಕೋದಂಡರಾಮಯ್ಯ ತಿಳಿಸಿದರು.

ಶರಣಾದರೆ ವೀರಪ್ಪನ್‌ಗೆ ರಕ್ಷಣೆ

ಮೈಸೂರು, ಜೂನ್ 2– ಕಾಡುಗಳ್ಳ ವೀರಪ್ಪನ್ ಶರಣಾಗತಿ ಬಯಸಿದರೆ ಅವನ ‍ಪ್ರಾಣಕ್ಕೆ ಸಂಪೂರ್ಣ ರಕ್ಷಣೆ ನೀಡುವ ಭರವಸೆಯನ್ನು ವಿಶೇಷ ಕಾರ್ಯಾಚರಣೆ ದಳದ ಮುಖ್ಯಸ್ಥ ಶಂಕರ ಬಿದರಿ ಅವರು ನೀಡಿದ್ದಾರೆ.

ಅವನ ತಂಡಕ್ಕೆ ಯಾವುದೇ ತೊಂದರೆಯಾಗದಂತೆ, ಅವರ ಪ್ರಾಣಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಹೊಣೆಯನ್ನು ಶಂಕರ ಬಿದರಿ ಹೊತ್ತಿದ್ದಾರೆ.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳೂ ಸೇರಿದಂತೆ ರಾಷ್ಟ್ರದ ಯಾವುದೇ ಪೊಲೀಸ್‌ ಠಾಣೆ ಅಥವಾ ನ್ಯಾಯಾಲಯದ ಮುಂದೆ ವೀರಪ್ಪನ್ ತನ್ನ ತಂಡದೊಂದಿಗೆ ಶರಣಾಗತನಾಗಬಹುದು ಎಂದು ಬಿದರಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !