ಬಿರುಮಳೆಗೆ ನೆಲಕ್ಕುರುಳಿದ ಮರ, ಕಂಬಗಳು

ಗುರುವಾರ , ಜೂನ್ 27, 2019
30 °C
ಭಾನುವಾರ ರಾತ್ರಿ ಜೋರು ಮಳೆ, ಬಿರುಗಾಳಿ ಆರ್ಭಟ

ಬಿರುಮಳೆಗೆ ನೆಲಕ್ಕುರುಳಿದ ಮರ, ಕಂಬಗಳು

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಜೋರು ಮಳೆ ಮತ್ತು ಬಿರುಗಾಳಿಗೆ ವಿವಿಧೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜತೆಗೆ ಕೆಲವೆಡೆ ದ್ರಾಕ್ಷಿ ತೋಟಗಳಿಗೆ ಹಾನಿ ಉಂಟಾಗಿದೆ.

ತಾಲ್ಲೂಕಿನ ಮುಸ್ಟೂರಿನಲ್ಲಿ ಕೆಲ ದ್ರಾಕ್ಷಿ ತೋಟಗಳು ಹಾನಿಯಾಗಿದ್ದು, ಕೆಲವೆಡೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಜತೆಗೆ ಎರಡು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ಇನ್ನು ಮಂಚನಬೆಲೆ ರಸ್ತೆಯಲ್ಲಿ ಎರಡು ವಿದ್ಯುತ್‌ ಕಂಬ, ದೊಡ್ಡದೊಂದು ಮರ ನೆಲಕ್ಕೆ ಉರುಳಿವೆ.

ತಾಲ್ಲೂಕಿನ ರಂಗಸ್ಥಳದಲ್ಲಿ ಒಂದು ವಿದ್ಯುತ್‌ ಕಂಬ, ಮರ ಬಿದ್ದಿದೆ. ನಗರದ ಅಂಬೇಡ್ಕರ್ ನಗರದಲ್ಲಿ ಬಿರುಗಾಳಿಗೆ ನಾಲ್ಕು ಮನೆಗಳ ಮೇಲ್ಚಾವಣಿಗೆ ಹಾನಿ ಉಂಟಾಗಿದೆ. ನಗರದ ಗ್ರಂಥಾಲಯದ ಬಳಿ ಬಹೃತ ಜಾಹೀರಾತು ಫಲಕವೊಂದು ನೆಲಕ್ಕುರುಳಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿ ಅಂದಾಜು ಕಾರ್ಯ ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !