ಲಂಕಾ ಗೆಲುವಿನ ಬೌಲರ್‌ಗಳೇ ಕಾರಣ: ತಿಸಾರ

ಭಾನುವಾರ, ಜೂನ್ 16, 2019
32 °C

ಲಂಕಾ ಗೆಲುವಿನ ಬೌಲರ್‌ಗಳೇ ಕಾರಣ: ತಿಸಾರ

Published:
Updated:
Prajavani

ಕಾರ್ಡಿಫ್ (ಪಿಟಿಐ):  ಮಂಗಳವಾರ ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಶ್ರೀಲಂಕಾ ಜಯ ಸಾಧಿಸಲು ಅನುಭವಿ ಬೌಲರ್‌ಗಳು ಕಾರಣ ಎಂದು ಆಟಗಾರ ತಿಸಾರ ಪೆರೆರಾ ಹೇಳಿದರು.

ಶ್ರೀಲಂಕಾ ತಂಡವು ಅಫ್ಗಾನಿಸ್ತಾನ ಎದುರು 201 ರನ್‌ಗಳನ್ನು ಗಳಿಸಿತ್ತು ಮಳೆ ಬಂದಿದ್ದರಿಂದ ಅಫ್ಗಾನಿಸ್ತಾನ ತಂಡಕ್ಕೆ ಪರಿಷ್ಕೃತ ಗುರಿ (41 ಓವರ್‌ಗಳಲ್ಲಿ 187) ನೀಡಲಾಗಿತ್ತು. ಅಫ್ಗಾನಿಸ್ತಾನ ತಂಡವು 152 ರನ್‌ಗಳಿಗೆ ಆಲೌಟ್‌ ಆಯಿತು. ನುವಾನ ಪ್ರದೀಪ್ (31ಕ್ಕೆ4) ಮತ್ತು ಲಸಿತ ್ಮಾಲಿಂಗ್ (39ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದಾಗಿ ಲಂಕಾ ಜಯಿಸಿತ್ತು.

‘ನಾವೆಲ್ಲರೂ ಆತ್ಮವಿಶ್ವಾಸದಿಂದ ಇದ್ದೆವು. ಸಣ್ಣ ಗುರಿ ನೀಡಿದ್ದರೂ ಅದನ್ನು ರಕ್ಷಿಸಿಕೊಳ್ಳುವ ವಿಶ್ವಾಸ ಇತ್ತು. ಆದ್ದರಿಂ ಮೂಲ ಯೋಜನೆಗೆ ನಾವು ಅಂಟಿಕೊಂಡೆವು. ಹೆಚ್ಚಿನ ಬದಲಾವಣೆಗಳಿಗೆ ಕೈಹಾಕಲಿಲ್ಲ’ ಎಂದು ಹೇಳಿದರು.

‘ನಮ್ಮ ಬ್ಯಾಟಿಂಗ್‌ ವಿಭಾಗವು ನಿರಾಶೆ ಮೂಡಿಸಿತು. ಉತ್ತಮ ಆರಂಭ ಲಭಿಸಿತ್ತು. ಆದರೂ ಅದರ ಲಾಭ ಪಡೆಯುವಲ್ಲಿ ನಾವು ಯಶಸ್ವಿಯಾಗಲಿಲ್ಲ. ನಂತರದ ವಿಕೆಟ್‌ಗಳು ಬೇಗನೆ ಪತನವಾದವು’ ಎಂದು ಪೆರೆರಾ ಹೇಳಿದರು. ಪಂದ್ಯದಲ್ಲಿ ಅವರು 78 ರನ್‌ಗಳನ್ನು ಗಳಿಸಿದ್ದರು.

ಬೌಲಿಂಗ್ ವೈಫಲ್ಯ ಕಾರಣ: ನಮ್ಮ ತಂಡದ ಸೋಲಿಗೆ ಬೌಲಿಂಗ್ ವೈಫಲ್ಯ ಕಾರಣ ಎಂದು ಅಫ್ಗಾನಿಸ್ತಾನ ತಂಡದ ನಾಯಕ ಗುಲ್ಬದೀನ್ ನೈಬ್ ಹೇಳಿದ್ದಾರೆ.

ಶ್ರೀಲಂಕಾ ಎದುರು ಪಂದ್ಯ ಸೋತ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೊದಲ ಹತ್ತು ಓವರ್‌ಗಳಲ್ಲಿ 79 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ದೊಡ್ಡ ಲೋಪ. ಅದು ಉತ್ತಮ ಆರಂಭವಾಗಿರಲಿಲ್ಲ. ಆ ಹಂತದಲ್ಲಿ ರನ್‌ಗಳನ್ನು ತಡೆಯಬೇಕಿತ್ತು. ಬೌಲರ್‌ಗಳು ಹೊಣೆಯನ್ನು ಸರಿಯಾಗಿ ನಿಭಾಯಿಸಲಿಲ್ಲ’ ಎಂದರು.

‘35 ಇತರೆ ರನ್‌ಗಳನ್ನು ನೀಡಿದ್ದು ಕೂಡ ದೊಡ್ಡ ಹಿನ್ನಡೆ. ಅಷ್ಟು ಪ್ರಮಾಣದಲ್ಲಿ ರನ್‌ಗಳನ್ನು ನೀಡಿರದೇ ಹೋಗಿದ್ದರೆ ಶ್ರೀಲಂಕಾ ತಂಡವು  ಇನ್ನೂರರ ಗಡಿ ತಲುಪುತ್ತಿರಲಿಲ್ಲ. ಆದ್ದರಿಂದ ನಮಗೆ ಗೆಲುವಿನ ಸಾಧ್ಯತೆ ಹೆಚ್ಚುತ್ತಿತ್ತು’ ಎಂದರು.

‘ಪಿಚ್ ಕೂಡ ವಿಭಿನ್ನವಾಗಿತ್ತು. ಬ್ರಿಸ್ಟಲ್‌ನಲ್ಲಿ ನಾವು ಆಸ್ಟ್ರೇಲಿಯಾ ಎದುರು ಆಡಿದ್ದ ಪಿಚ್‌ಗೂ ಇಲ್ಲಿಯದಕ್ಕೂ ತುಂಬಾ ವ್ಯತ್ಯಾವಿತ್ತು’ ಎಂದು ನೈಬ್ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !