ಕಿಡಿಗೇಡಿಗಳಿಂದ ಯುವಕನಿಗೆ ಚೂರಿ ಇರಿತ

ಬುಧವಾರ, ಜೂನ್ 19, 2019
23 °C

ಕಿಡಿಗೇಡಿಗಳಿಂದ ಯುವಕನಿಗೆ ಚೂರಿ ಇರಿತ

Published:
Updated:

ಬೆಂಗಳೂರು: ಮಹಿಳೆಯರನ್ನು ರೇಗಿಸುತ್ತಿದ್ದ ಕಿಡಿಗೇಡಿಗಳನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಆರ್.ಆರ್‌. ನಗರದಲ್ಲಿ ನಡೆದಿದೆ.

ಪವನ್ ಸುಬ್ಬಯ್ಯ ಇರಿತಕ್ಕೆ ಒಳಗಾದ ವ್ಯಕ್ತಿ. ಪವನ್ ತನ್ನ ಗೆಳೆಯನ ಮದುವೆಗೆಂದು ಇಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಈ ವೇಳೆ ಐವರ ಗುಂಪು ಧೂಮಪಾನ ಮಾಡುತ್ತಾ ಮದುವೆ ಮನೆಗೆ ಬಂದಿದ್ದ ಮಹಿಳೆಯರನ್ನು ರೇಗಿಸುತ್ತಿತ್ತು.

ಇದನ್ನು ಪವನ್ ಹಾಗೂ ಈತನ ಸ್ನೇಹಿತರು ಪ್ರಶ್ನಿಸಿದ್ದರು. ಈ ವೇಳೆ ಜಗಳ ತೆಗೆದ ಗುಂಪು, ಪವನ್‌ಗೆ ಇರಿದು ಪರಾರಿಯಾಗಿದೆ. ಆರ್‌.ಆರ್‌. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !