ವಿಶ್ವಕಪ್‌ ಕ್ರಿಕೆಟ್‌: ಸೌತಾಂಪ್ಟನ್ ಪಂದ್ಯದಲ್ಲಿ ‘ಸಾಕ್ಷಿ’

ಮಂಗಳವಾರ, ಜೂನ್ 25, 2019
26 °C

ವಿಶ್ವಕಪ್‌ ಕ್ರಿಕೆಟ್‌: ಸೌತಾಂಪ್ಟನ್ ಪಂದ್ಯದಲ್ಲಿ ‘ಸಾಕ್ಷಿ’

Published:
Updated:
Prajavani

ಲಂಡನ್: ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ಧೋನಿ ಬಿಸಿಸಿಐ ನಿಯಮವನ್ನು ಉಲ್ಲಂಘಿಸಿದ್ದಾರೆಯೇ? ಅವರಿಗೆ ಶಿಕ್ಷೆ ಕಾದಿದೆಯೇ?

ಇಂತಹದೊಂದು ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಧೋನಿಯವರ  ಪತ್ನಿ ಸಾಕ್ಷಿ ಸಿಂಗ್ ಮತ್ತು ಮಗಳು ಜೀವಾ  ಬುಧವಾರ ಸೌತಾಂಪ್ಟನ್‌ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಹಾಜರಿದ್ದದ್ದು.

ಕ್ರೀಡಾಂಗಣದ ವಿಶೇಷ ಗ್ಯಾಲರಿಯಲ್ಲಿ ತಾವು ಮತ್ತು ಮಗಳು ಕುಳಿತು ಪಂದ್ಯವನ್ನು ವೀಕ್ಷಿಸಿದ ಚಿತ್ರಗಳನ್ನು ಸಾಕ್ಷಿ ಧೋನಿ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ. ಕೆಲವು ವಿಡಿಯೊಗಳನ್ನು ಅಪಲೋಡ್ ಮಾಡಿದ್ದಾರೆ.

ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಟಗಾರರು  ತಮ್ಮ ಮೊದಲ ಪಂದ್ಯದ 15 ದಿನಗಳ ನಂತರವೇ ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.

ಆದರೆ ಇದೀಗ ಧೋನಿ ಪತ್ನಿ ಮತ್ತು ಮಗಳು ಮೊದಲ ಪಂದ್ಯದಲ್ಲಿಯೇ ಕ್ರೀಡಾಂಗಣದಲ್ಲಿರುವುದು ಅಚ್ಚರಿ ಮೂಡಿಸಿದೆ.

ಇದರಿಂದಾಗಿ ಧೋನಿ ನಿಯಮವನ್ನು ಉಲ್ಲಂಘಿಸಿದ್ದಾರೆನ್ನಲಾಗಿದ್ದು, ಬಿಸಿಸಿಐ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಕುರಿತು ಬಿಸಿಸಿಐ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.

ಭಾರತ ತಂಡವು ಮೇ 23ರಂದು ಇಂಗ್ಲೆಂಡ್‌ಗೆ ತೆರಳಿತ್ತು. ಬುಧವಾರ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್‌ಗಳಿಂದ ಗೆದ್ದಿತು. ಧೋನಿ 34 ರನ್‌ ಗಳಿಸಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 3

  Frustrated
 • 0

  Angry

Comments:

0 comments

Write the first review for this !