ಭಾನುವಾರ, ಸೆಪ್ಟೆಂಬರ್ 22, 2019
22 °C

‘ಕಿಂಗ್ ಕೊಹ್ಲಿ’ ಚಿತ್ರ ಸಮರ್ಥಿಸಿಕೊಂಡ ಐಸಿಸಿ

Published:
Updated:
Prajavani

ಲಂಡನ್: ವಿರಾಟ್ ಕೊಹ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಹಿರಿಯ ಕ್ರಿಕೆಟಿಗ ಮೈಕೆಲ್ ವಾನ್ ಅವರು ಮಾಡಿದ ಟೀಕೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತಿರುಗೇಟು ನೀಡಿದೆ.

‘ಸದ್ಯ ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಚಿತ್ರವನ್ನು ಪ್ರಕಟಿಸಿದ್ದೇವೆ. ಇದರಲ್ಲಿ ತಾರತಮ್ಯ ಎಲ್ಲಿದೆ’ ಎಂದು ಐಸಿಸಿ ತಿರುಗೇಟು ನೀಡಿದೆ.

ಭಾರತ ತಂಡದ ವಿರಾಟ್ ಕೊಹ್ಲಿ ಅವರನ್ನು ರಾಜನಂತೆ ಬಿಂಬಿಸಿದ್ದ ಚಿತ್ರವನ್ನು ಐಸಿಸಿಯು ಪ್ರಕಟಿಸಿತ್ತು.  ಇದಕ್ಕೆ ಮೈಕೆಲ್ ವಾನ್ ಅವರು ವ್ಯಂಗ್ಯವಾಡಿದ್ದರು.

Post Comments (+)