ಕಾರವಾರ ಮಳೆ ಹಾನಿ ಒಂದು ಕೋಟಿ ರೂ.

ಸೋಮವಾರ, ಜೂನ್ 24, 2019
30 °C
ಶನಿವಾರ

ಕಾರವಾರ ಮಳೆ ಹಾನಿ ಒಂದು ಕೋಟಿ ರೂ.

Published:
Updated:

ಕಾರವಾರ ಮಳೆ ಹಾನಿ ಒಂದು ಕೋಟಿ ರೂ.

ಕಾರವಾರ, ಜೂನ್ 6– ಕಾರವಾರ ನಗರದಲ್ಲಿ ಬಿದ್ದ ಭಾರಿ ಬಿರುಗಾಳಿ ಮಳೆಯಿಂದಾಗಿ ಇಲ್ಲಿಯವರೆಗೆ 1.15 ಕೋಟಿ ರೂಪಾಯಿಗಳಷ್ಟು ಹಾನಿ ಸಂಭವಿಸಿದೆ ಎಂದು ನೂತನ ಜಿಲ್ಲಾಧಿಕಾರಿ ಶೋಭನ ಕುಮಾರ ಪಟ್ನಾಯಕ್ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅನೇಕ ಮನೆಗಳು ಕುಸಿದಿದ್ದು ನೂರಾರು ಮರಗಳು ಬಿದ್ದಿವೆ. ಇದರಿಂದಾಗಿ ಒಬ್ಬರು ಸತ್ತಿದ್ದಾರೆ.

ಪೃಥ್ವಿ ಎರಡನೇ ಪರೀಕ್ಷಾ ಉಡಾವಣೆ ಯಶಸ್ವಿ

ಚಂಡೀಪುರ (ಒರಿಸ್ಸಾ), ಜೂನ್ 6 (ಪಿಟಿಐ)– ಭೂಮಿಯಿಂದ ಭೂಮಿಯ ಮೇಲ್ಗಡೆ ಗುರಿಗಳ ಮೇಲೆ ದಾಳಿ ಮಾಡುವ ಭಾರತದ ಸಮೀಪವ್ಯಾಪ್ತಿ ಕ್ಷಿಪಣಿ ‘ಪೃಥ್ವಿ’ಯ ಎರಡನೇ ಪರೀಕ್ಷಾ ಉಡಾವಣೆಯನ್ನು ಸೈನ್ಯವು ಇಂದು ಯಶಸ್ವಿಯಾಗಿ ನಡೆಸಿತು.

ತೆತ್ರಾ ಸಂಚಾರಿ ಉಡಾವಣಾ ಪೀಠದಿಂದ ಈ ಕ್ಷಿಪಣಿಯನ್ನು ಬೆಳಿಗ್ಗೆ 11 ಗಂಟೆ 7 ನಿಮಿಷಕ್ಕೆ ಹಾರಿಸಲಾಯಿತು. ಕ್ಷಿ‍ಪಣಿಯು ನಾಲ್ಕು ನಿಮಿಷಗಳಲ್ಲಿ ಮೊದಲೇ ನಿಗದಿಪಡಿಸಿದ ಗುರಿಯನ್ನು ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾರ 501: ವಿಶ್ವ ದಾಖಲೆ

ಲಂಡನ್, ಜೂನ್ 6 (ರಾಯಿಟರ್)– ವೆಸ್ಟ್ ಇಂಡೀಸಿನ ಬ್ರಿಯಾನ್ ಲಾರ ಅವರು ಇಂದು ಪ್ರಥಮ ದರ್ಜೆ ಕ್ರಿಕೆಟ್‌ ಇತಿಹಾಸ
ದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದರು. ವಾರ್‌ವಿಕ್ ಪೈರ್ ಪರ ಆಡುತ್ತಿರುವ ಲಾರ 501 ರನ್‌ಗಳನ್ನು ಗಳಿಸಿ ಔಟಾಗದೆ ಉಳಿದರು.

ಪಾಕಿಸ್ತಾನದ ಹನೀಫ್ ಮಹಮ್ಮದ್ ಅವರ ಹೆಸರಿನಲ್ಲಿ 1958–59ರಿಂದ ಉಳಿದಿದ್ದ 499 ರನ್‌ಗಳ ದಾಖಲೆಯನ್ನು ಅವರು ಮುರಿದರು.
ಬರ್ಮಿಂಗ್‌ಹ್ಯಾಂನಲ್ಲಿ ಡರ್‌ಹ್ಯಾಂ ವಿರುದ್ಧ ನಡೆದ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ಇಂದು ಲಾರ ದಾಖಲೆ ಸೃಷ್ಟಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !