ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಸಂಚಾರ ಬಂದ್‌

ಮಂಗಳವಾರ, ಜೂನ್ 18, 2019
24 °C
ಮೂಲಸೌಕರ್ಯ ಮತ್ತು ವಿಸ್ತರಣೆ ಕಾರ್ಯ

ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಸಂಚಾರ ಬಂದ್‌

Published:
Updated:

ಬೆಂಗಳೂರು: ವಿಸ್ತರಣೆ ಕಾರ್ಯ ನಡೆಯುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ಸಂಪರ್ಕ ರಸ್ತೆಯನ್ನು (1.4 ಕಿ.ಮೀ) ಜೂನ್‌ 10ರಿಂದ ಮುಚ್ಚಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

2021ರ ಪ್ರಾರಂಭದಲ್ಲಿ ಈ ಮಾರ್ಗ ಮತ್ತೆ ತೆರೆದುಕೊಳ್ಳುವ ನಿರೀಕ್ಷೆ ಇದೆ. ಅಲ್ಲಿಯವರೆಗೆ, ಎಲ್ಲ ವಾಹನಗಳ ಸಂಚಾರವನ್ನು ನೂತನವಾಗಿ ನಿರ್ಮಿಸಲಾಗಿರುವ ಷಟ್ಪಥ ದಕ್ಷಿಣ ಸಂಪರ್ಕ ರಸ್ತೆಯ ಕಡೆ ತಿರುಗಿಸಲಾಗುತ್ತದೆ.

ಬದಲಿ ಮಾರ್ಗ: ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಟ್ರಂಪೆಟ್‌ ಇಂಟರ್‌ಚೇಂಜ್‌ ನಂತರ, ಬಲಕ್ಕೆ ತಿರುಗಬೇಕು. ನಂತರ, ದಕ್ಷಿಣ ಸಂಪರ್ಕ ರಸ್ತೆ ಪ್ರವೇಶಿಸಿ ನಿಲ್ದಾಣವನ್ನು ತಲುಪಬೇಕು. ವಿಮಾನ ನಿಲ್ದಾಣದಿಂದ, ನಿರ್ಗಮನ ದ್ವಾರದಿಂದ ಹೊರಬರುವ ವಾಹನಗಳು ಮತ್ತೆ ದಕ್ಷಿಣ ಸಂಪರ್ಕ ರಸ್ತೆ ತಲುಪಲು ಪಿ6 ಪಾರ್ಕಿಂಗ್‌ ಕಡೆಗೆ ಸಾಗಬೇಕು. ಆಗಮನ ದ್ವಾರಗಳಿಂದ ಹಿಂದಿರುಗುವ ವಾಹನಗಳು ಪ್ರಸ್ತುತ ದಕ್ಷಿಣ ಸಂಪರ್ಕ ರಸ್ತೆ ಕಡೆಗೆ ಇರುವ ಮಾರ್ಗವನ್ನು ಬಳಸಿ ಮುಂದುವರಿಯಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !