ನಾಟಿ ಮರಗಳ ಜೈವಿಕ ಉದ್ಯಾನ ಲೋಕಾರ್ಪಣೆ

ಗುರುವಾರ , ಜೂನ್ 20, 2019
30 °C
ಹೆಸರಘಟ್ಟದಲ್ಲಿ ಹಸಿರ ಹೊದಿಕೆ l ಸಾಲುಮರದ ತಿಮ್ಮಕ್ಕರಿಂದ ಉದ್ಘಾಟನೆ

ನಾಟಿ ಮರಗಳ ಜೈವಿಕ ಉದ್ಯಾನ ಲೋಕಾರ್ಪಣೆ

Published:
Updated:
Prajavani

ಹೆಸರಘಟ್ಟ: ಭಾರತೀಯ ಕೃಷಿ ಸಂಶೋಧನಾ ಪರಿಷತ್‌ ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ನಿರ್ಮಿಸಿರುವ ಜೈವಿಕ ಉದ್ಯಾನವನ್ನು ಸಾಲುಮರದ ತಿಮ್ಮಕ್ಕ ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ತಿಮ್ಮಕ್ಕ, ‘ನಾನು ಬೆಳೆಸಿದ ಮರಗಳನ್ನು ಸರ್ಕಾರ ಕಡಿಯುವುದಿಲ್ಲ ಎಂದು ಹೇಳಿದೆ. ಅವರು ಕೊಟ್ಟ ಭರವಸೆಯಿಂದ ಸಂತೋಷವಾಗಿದೆ’ ಎಂದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ್, ‘25 ಎಕರೆ ಭೂಪ್ರದೇಶದ ಜೈವಿಕ ಉದ್ಯಾನದಲ್ಲಿ 150 ನಾಟಿ ತಳಿಗಳ ಮರಗಳನ್ನು ಬೆಳೆಸಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಪರೂಪದ ಗಿಡಗಳ ತಳಿಗಳನ್ನು ತಂದು ಇಲ್ಲಿ ಸಂರಕ್ಷಿಸಲಾಗಿದೆ’ ಎಂದರು.

ರಾಷ್ಟ್ರೀಯ ತೋಟಗಾರಿಕೆ ನಿರ್ದೇಶಕ ರಾಜಣ್ಣ, ‘ಪ್ರಾಣಿ, ಪಕ್ಷಿಗಳ ಜೀವ ಸಂಕುಲ ವಿನಾಶದ ಅಂಚಿನತ್ತ ಸಾಗಿದೆ. ಮನುಷ್ಯ ಪ್ರಕೃತಿಯನ್ನು ಕಬಳಿಸುತ್ತಿದ್ದಾನೆ. ಈ ಕಬಳಿಕೆಯ ದಾಹ ಇದೇ ರೀತಿ ಮುಂದುವರಿದರೆ ನೀರು, ಗಾಳಿಗಳು ಇಲ್ಲದೇ ಮನುಷ್ಯ ಸಂತತಿ ನಾಶವಾಗುತ್ತದೆ’ ಎಂದು ಎಚ್ಚರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !