ಸ್ಮಾರ್ಟ್‌ ಸಿಟಿ: ರಾಜ್ಯಕ್ಕೆ 6ನೇ ಸ್ಥಾನ

ಬುಧವಾರ, ಜೂನ್ 26, 2019
28 °C

ಸ್ಮಾರ್ಟ್‌ ಸಿಟಿ: ರಾಜ್ಯಕ್ಕೆ 6ನೇ ಸ್ಥಾನ

Published:
Updated:

ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ರಾಜ್ಯವು 11 ರಿಂದ 6 ನೇ ಸ್ಥಾನಕ್ಕೇರಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು,‘ ಈ ಯೋಜನೆಯ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದೆ. ₹6,448 ಕೋಟಿ ಮೊತ್ತದ ಯೋಜನೆಯಲ್ಲಿ ₹4,411.9 ಕೋಟಿ ಮೊತ್ತದ ಕಾಮಗಾರಿ ಆರಂಭವಾಗಿದೆ.

ಇನ್ನು ಉಳಿದ ₹ 2,500 ಕೋಟಿ ಮೊತ್ತ ಕಾಮಗಾರಿಗೆ ಟೆಂಡರ್ ಕರೆದು ಯೋಜನೆ ಅಂತಿಮಗೊಳಿಸಲಾಗುವುದು ಎಂದರು. ಕೇಂದ್ರ ಸರ್ಕಾರ ಪ್ರತಿ ಸ್ಮಾರ್ಟ್ ಸಿಟಿಗೆ ತಲಾ ₹100 ಕೋಟಿ ನೀಡಿದರೆ, ರಾಜ್ಯ ಸರ್ಕಾರ ₹100 ಕೋಟಿ ನೀಡುತ್ತದೆ’ ಎಂದರು.

ಬೆಂಗಳೂರು, ಶಿವಮೊಗ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ, ತುಮಕೂರು, ಹುಬ್ಬಳ್ಳಿ– ಧಾರವಾಡ ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಯಾವುದೇ ನಗರದಲ್ಲೂ ಕಾಮಗಾರಿ ಕುಂಠಿತವಾಗಿಲ್ಲ ಎಂದು ಅವರು ಹೇಳಿದರು..

‘ಸ್ಮಾರ್ಟ್‌ ಸಿಟಿ’ ರ‍್ಯಾಂಕಿಂಗ್‌: ಬೆಳಗಾವಿ 45 ರಿಂದ 38 , ದಾವಣಗೆರೆ 12 ರಿಂದ 15, ಹುಬ್ಬಳ್ಳಿ– ಧಾರವಾಡ 47 ರಿಂದ 28, ಮಂಗಳೂರು 52 ರಿಂದ 40, ಶಿವಮೊಗ್ಗ 38 ರಿಂದ 33, ತುಮಕೂರು 28 ರಿಂದ 22 ಮತ್ತು ಬೆಂಗಳೂರು 55 ರಿಂದ 31ನೇ ರ‍್ಯಾಂಕಿಂಗ್‌ ತಲುಪಿದೆ ಎಂದು ಅವರು ವಿವರ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !