ನೇಪಾಳದಲ್ಲಿ ಬಾಲ್ಯವಿವಾಹ ಹೆಚ್ಚು

ಮಂಗಳವಾರ, ಜೂನ್ 18, 2019
23 °C

ನೇಪಾಳದಲ್ಲಿ ಬಾಲ್ಯವಿವಾಹ ಹೆಚ್ಚು

Published:
Updated:

ಕಠ್ಮಂಡು (ಪಿಟಿಐ): ಬಾಲ್ಯವಿವಾಹ ಹೆಚ್ಚಾಗಿರುವ ಜಗತ್ತಿನ ಮೊದಲ 10 ರಾಷ್ಟ್ರಗಳ ಪಟ್ಟಿಯಲ್ಲಿ ನೇಪಾಳ ಸೇರಿದೆ. ನೇಪಾಳದಲ್ಲಿ ಹುಡುಗರ ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬಂದಿದೆ ಎಂದು ಯುನಿಸೆಫ್‌(ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಬಾಲ್ಯ ವಿವಾಹ ಕುರಿತು ನಡೆಸಿದ ಅಧ್ಯಯನದಲ್ಲಿ ವಿವರಿಸಿದೆ.

ನೇಪಾಳದಲ್ಲಿ ಪ್ರತೀ 10 ಪುರುಷರ ಪೈಕಿ ಒಬ್ಬರು ಬಾಲ್ಯ ವಿವಾಹಕ್ಕೆ ಒಳಗಾಗಿದ್ದಾರೆ ಎಂದು ಈ ವರದಿ ಹೇಳಿದೆ. 82 ರಾಷ್ಟ್ರಗಳ ಮಾಹಿತಿಯನ್ನು ಆಧರಿಸಿ ನಡೆಸಿದ ಈ ಅಧ್ಯಯನದಲ್ಲಿ, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹುಡುಗರ ಬಾಲ್ಯ ವಿವಾಹ ಹೆಚ್ಚಾಗಿದೆ ಎಂದು  ಉಲ್ಲೇಖಿಸಲಾಗಿದೆ. ಸಹರಾ ಉಪಖಂಡ ಆಫ್ರಿಕಾ, ಲ್ಯಾಟಿನ್‌ ಅಮೆರಿಕ, ಕೆರಿಬಿಯನ್‌, ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿ ಹುಡುಗರ ಬಾಲ್ಯವಿವಾಹ ಪದ್ಧತಿ ಇದೆ. 

’ಬಾಲ್ಯ ವಿವಾಹವು ಬಾಲ್ಯವನ್ನೇ ಕಸಿದುಕೊಳ್ಳುತ್ತದೆ. ಇನ್ನೂ ಪ್ರೌಢಾವಸ್ಥೆಗೆ ಬಾರದ ಮಕ್ಕಳೇ ದೊಡ್ಡವರ ಜವಾಬ್ದಾರಿಯನ್ನು ಬಹುಬೇಗನೇ ಹೊರಬೇಕಾಗುತ್ತದೆ’ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಟ್ಟ ಫೋರ್‌ ಅಭಿಪ್ರಾಯಪಟ್ಟಿದ್ದಾರೆ. ‘ಬೇಗ ಮದುವೆಯಾಗುವ ಗಂಡುಮಕ್ಕಳು ಬೇಗನೇ ತಂದೆಯಾಗಿ ಬಿಡುತ್ತಾರೆ. ಅವರ ಶಿಕ್ಷಣ ಮೊಟಕುಗೊಂಡು ಉದ್ಯೋಗ ಅವಕಾಶ ಕುಂಠಿತವಾಗುವುದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ’ ಎಂದರು.

ಹತ್ತನೇ ಸ್ಥಾನ ಪಡೆದಿರುವ ನೇಪಾಳವು ಹುಡುಗರು ಮತ್ತು ಹುಡುಗಿಯರ ಬಾಲ್ಯ ವಿವಾಹ ಪದ್ಧತಿ ಹೊಂದಿರುವ ದಕ್ಷಿಣ ಏಷ್ಯಾದ ಏಕೈಕ ದೇಶವಾಗಿದೆ.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !