ದುಬೈ: 12 ಭಾರತೀಯರ ಸಾವು

ಶುಕ್ರವಾರ, ಜೂನ್ 21, 2019
23 °C
ಸೂಚನಾ ಫಲಕಕ್ಕೆ ಬಸ್ ಡಿಕ್ಕಿ: ಮೃತಪಟ್ಟವರಲ್ಲಿ ಆರು ಮಂದಿ ಕೇರಳದವರು

ದುಬೈ: 12 ಭಾರತೀಯರ ಸಾವು

Published:
Updated:
Prajavani

ದುಬೈ (ಪಿಟಿಐ): ರಸ್ತೆ ಸೂಚನಾ ಫಲಕಕ್ಕೆ ಬಸ್ ಡಿಕ್ಕಿ ಹೊಡೆದು, ಹನ್ನೆರಡು ಭಾರತೀಯರು ಸೇರಿದಂತೆ ಹದಿನೇಳು ಮಂದಿ ಮೃತಪಟ್ಟಿರುವ ದಾರುಣ ಘಟನೆ ದುಬೈನಲ್ಲಿ ನಡೆದಿದೆ. ಮೃತಪಟ್ಟವರಲ್ಲಿ ಆರು ಮಂದಿ ಕೇರಳದವರು ಇದ್ದಾರೆ.

ಒಮಾನ್‌ನಿಂದ ದುಬೈಗೆ ಬರುತ್ತಿದ್ದ ಬಸ್ ಗುರುವಾರ ಸಂಜೆ ಅಲ್‌– ರಶೀದಿಯಾ ಮೆಟ್ರೊ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. 

ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ. ಬಸ್‌ ನಿಗದಿತ ಮಾರ್ಗ ಬಿಟ್ಟು ಬೇರೆ ಕಡೆ ಹೋಗಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.ಬಸ್‌ನಲ್ಲಿ ಮೂವತ್ತೊಂದು ಪ್ರಯಾಣಿಕರಿದ್ದರು. ಒಂಬತ್ತು ಮಂದಿಗೆ ಗಂಭೀರ ಗಾಯಗಳಾಗಿವೆ. 

ಕನ್ನೂರು ಜಿಲ್ಲೆಯ ಉಮ್ಮರ್‌ ಚೊನೊಕಟಾವತ್ ಹಾಗೂ ಇವರ ಪುತ್ರ ನಬೀಲ್‌ ಉಮ್ಮರ್‌ , ತ್ರಿಶೂರಿನ ಜಮಾಲುದ್ದೀನ್‌, ತಿರುವನಂತಪುರದ ದೀಪಕ್‌ ಕುಮಾರ್‌, ವಾಸುದೇವನ್‌, ಥಿಲಕನ್‌ ಮೃತಪಟ್ಟ ಕೇರಳದವರು.

ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಎಡಭಾಗ ತುಂಡಾಗಿದ್ದು, ಆ ಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಸಾವನ್ನಪ್ಪಿ
ದ್ದಾರೆ. ಕೆಲವು ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಮೃತಪಟ್ಟ ಭಾರತೀಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ದುಬೈ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಮೃತದೇಹಗಳನ್ನು ಭಾರತಕ್ಕೆ ಮರಳಿಸಲು ಅಗತ್ಯವಾದ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ವಾಪಸ್ಸು ನೀಡಲಾಗುವುದು ಎಂದು ರಾಯಭಾರ ಕಚೇರಿ ತಿಳಿಸಿದೆ. 

‘ಬಸ್‌ ಅಪಘಾತದಲ್ಲಿ 12 ಭಾರತೀಯರು ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತಪಟ್ಟವರ ಕುಟುಂಬದವ
ರೊಂದಿಗೆ ರಾಯಭಾರ ಕಚೇರಿ ಸಂಪರ್ಕದಲ್ಲಿದೆ’ ಎಂದು ಭಾರತೀಯ ಕಾನ್ಸುಲರ್‌ ಜನರಲ್‌ ವಿಪುಲ್‌ ಟ್ವೀಟ್‌ ಮಾಡಿದ್ದಾರೆ.

ಗಾಯಗೊಂಡ ನಾಲ್ಕು ಮಂದಿ ಭಾರತೀಯರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳಿಸಿಕೊಟ್ಟಿದ್ದು ಮೂವರು ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿತ್ತು.

ಅಪಘಾತಕ್ಕೀಡಾದ ಮ್ವಾಸಾಲಾತ್ ಕಂಪನಿಯ ಬಸ್ ಒಮಾನ್ ಸರ್ಕಾರದ ಒಡೆತನಕ್ಕೆ ಸೇರಿದ್ದಾಗಿದೆ. ಮ್ವಾಸಾಲಾತ್ ಕಂಪನಿ ಬಸ್‌ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. 

ಘಟನೆ ಕುರಿತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಹಿತಿಗೆ +971–565463903 ಸಂಪರ್ಕಿಸಬಹುದು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !