ಸಮಸ್ಯೆ ಹೇಳಿಕೊಂಡರೆ ಪರಿಹಾರ ನಿಶ್ಚಿತ

ಬುಧವಾರ, ಜೂನ್ 19, 2019
32 °C
ಸಾರ್ವಜನಿಕರಿಗೆ ಡಿಡಿಪಿಐ ಪಾಂಡುರಂಗ ಭರವಸೆ

ಸಮಸ್ಯೆ ಹೇಳಿಕೊಂಡರೆ ಪರಿಹಾರ ನಿಶ್ಚಿತ

Published:
Updated:

ಮೈಸೂರು: ಶಾಲೆಗಳಲ್ಲಿನ ಸಮಸ್ಯೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ‍ಪೋಷಕರು ಭಯಪಡದೆ ದೂರುಗಳನ್ನು ನೀಡಬೇಕು. ಆಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲರಿಗೂ ಸಮಾನ ಶಿಕ್ಷಣ ನೀಡಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಪಾಂಡುರಂಗ ಕಿವಿಮಾತು ಹೇಳಿದರು.

ಶುಕ್ರವಾರ ನಡೆದ ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರಿಸಿದರು. ಸಮಸ್ಯೆಗಳನ್ನು ದಾಖಲಿಸಿಕೊಂಡು ತಮ್ಮ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆಯನ್ನೂ ನೀಡಿದರು.

ಪ್ರಮುಖವಾಗಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಹಾಗೂ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಹೆಚ್ಚು ಕರೆಗಳು ಬಂದವು. ಜತೆಗೆ, ಶಿಕ್ಷಕರ ಕೊರತೆ, ಶಾಲೆಗಳಿಗೆ ಡೊನೇಷನ್‌ ಸ್ವೀಕಾರ, ಪಠ್ಯಪುಸ್ತಕಕ್ಕೆ ಅಧಿಕ ಶುಲ್ಕ ಪಡೆಯುವುದರ ಬಗ್ಗೆ ಆಕ್ಷೇಪಗಳು ಬಂದವು. ಈ ಕುರಿತು ಆಪ್ತವಾಗಿ ಉತ್ತರಿಸಿದ ಅವರು, ಕೂಡಲೇ ಕ್ರಮ ಕೈಗೊಂಡು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದಾಗಿ ತಿಳಿಸಿದರು.

ಹೆದರದೇ ಮಾಹಿತಿ ನೀಡಿ: ‘ಖಾಸಗಿ ಶಾಲೆಗಳಲ್ಲಿ ಪಠ್ಯಪುಸ್ತಕ ನೀಡಲು ಸಾವಿರಾರು ರೂಪಾಯಿ ಪಡೆಯುತ್ತಿದ್ದಾರೆ ಎಂದು ಪೋಷಕರೊಬ್ಬರು ಕರೆಮಾಡಿ ದೂರು ಹೇಳಿದರು. ಬಡವರಾದ ನಮಗೆ ಇಷ್ಟು ದೊಡ್ಡಪ್ರಮಾಣದ ಶುಲ್ಕ ಭರಿಸಲು ಕಷ್ಟವಾಗುತ್ತದೆ’ ಎಂದು ದುಃಖ ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಪಾಂಡುರಂಗ, ‘ನಮಗೆ ದೂರು ನೀಡಿದರೆ ಮಾತ್ರ ನಾವು ಅಧಿಕೃತವಾಗಿ ಕ್ರಮ ವಹಿಸಲು ಸಾಧ್ಯ. ಸಾಮಾನ್ಯವಾಗಿ ನಾಗರಿಕರು ಈ ಕುರಿತು ದೂರುಗಳನ್ನೇ ನೀಡಿಲ್ಲ. ಧೈರ್ಯವಾಗಿ ದೂರು ನೀಡಿ, ಸಮಸ್ಯೆಗೆ ಪರಿಹಾರ ಪಡೆಯಿರಿ’ ಎಂದು ತಿಳಿಸಿದರು.

ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಲ್ಲಿ ‘ಆರ್‌ಟಿಇ’ ಅಡಿ ಮಕ್ಕಳನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು. ‘ಆರ್‌ಟಿಇ ಕಾಯ್ದೆ ಪಾಲಿಸುವುದು ಕಡ್ಡಾಯ. ಈ ಕುರಿತು ಸಭೆ ನಡೆಸಿ ಎಲ್ಲ ಶಾಲಾ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಮಕ್ಕಳಿಗೆ ದಾಖಲಾತಿ ನೀಡದೇ ಇದ್ದಲ್ಲಿ ಕಠಿಣ ಕಾನೂನು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ಶಾಲಾ ಕಟ್ಟಡ ಮಂಜೂರಾಗಿಯೂ ಸೌಲಭ್ಯ ಸಿಗದೇ ಇದ್ದರೆ ಪರಿಶೀಲಿಸಲಾಗುವುದು. ಬಿಇಒಗಳನ್ನು ಸ್ಥಳಕ್ಕೆಕಳುಹಿಸಿ ವರದಿ ಪಡೆಯ ಲಾಗುವುದು. ಸೌಲಭ್ಯ ನೀಡುವುದು ಮೊದಲ ಆದ್ಯತೆ ಎಂದರು. ಶಿಕ್ಷಣ ಇಲಾಖೆ ಅಧೀಕ್ಷಕರಾದ ರಘುನಾಥ್‌, ಎಂ.ಕೆ.ಸ್ವಾಮಿ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !