ಕುಕ್ಕೆ ದೇವಸ್ಥಾನ–ಮಠದ ಮಧ್ಯೆದ ವಿವಾದ: 10ರೊಳಗೆ ಸಂಧಾನ ಸಭೆ

ಮಂಗಳವಾರ, ಜೂನ್ 18, 2019
23 °C
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು

ಕುಕ್ಕೆ ದೇವಸ್ಥಾನ–ಮಠದ ಮಧ್ಯೆದ ವಿವಾದ: 10ರೊಳಗೆ ಸಂಧಾನ ಸಭೆ

Published:
Updated:
Prajavani

ಸುಬ್ರಹ್ಮಣ್ಯ: ‘ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಸಂಪುಟ ಮಠದ ನಡುವೆ ತಲೆದೋರಿರುವ ಸಂಘರ್ಷ ತಪ್ಪಿಸಿ ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತಾಗಲು ಇದೇ 10ರ ಒಳಗೆ ಸಂಧಾನ ಸಭೆ ನಡೆಸಲಾಗುವುದು’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.

‘ದೇವಸ್ಥಾನ ಹಾಗೂ ಮಠದ ನಡುವೆ ಹಿಂದಿನಿಂದ ಕೆಲವು ವಿಚಾರಗಳಲ್ಲಿ ಸಂಘರ್ಷವಿದ್ದರೂ ಉತ್ತಮ ಬಾಂಧವ್ಯ ಇತ್ತು. ಇತ್ತೀಚಿನ ದಿನಗಳಲ್ಲಿ ಗೊಂದಲಗಳು ಏರ್ಪಟ್ಟು ಅತಿರೇಕದ ಹಂತಕ್ಕೆ ತಲುಪುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಕ್ಷೇತ್ರದಲ್ಲಿ ಶಾಂತಿ ನೆಲೆಸಬೇಕು. ಹಿಂದೂಗಳ ಶ್ರದ್ಧಾ ಕೇಂದ್ರದಲ್ಲಿ ಎದ್ದಿರುವ ಸಂಘರ್ಷವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸುವುದು ಸೂಕ್ತ. ಇದಕ್ಕಾಗಿ ಎರಡೂ ಕಡೆಯವರಿಂದ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಮುಂದಿನ ಸಭೆಗೆ ಸೂಕ್ತ ಸ್ಥಳ ನಿಗದಿಗೊಳಿಸಲಾಗುವುದು. ಅನ್ಯೋನ್ಯತೆ ಸೃಷ್ಟಿಸುವ ರೀತಿಯಲ್ಲಿ ಆ ಸಂಧಾನ ಸೂತ್ರ ಇರುತ್ತದೆ’ ಎಂದು ತಿಳಿಸಿದರು.

ವಿವಾದ ಏನು?: ಮಠದವರು ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಹೆಸರನ್ನು ದುರುಪಯೋಗಪಡಿಸುತ್ತಾರೆ. ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ಸಹಿತ ಪ್ರಮುಖ ಸೇವೆಗಳನ್ನು ಮಠದಲ್ಲಿ ನಡೆಸುತ್ತಾರೆ. ಇತ್ಯಾದಿ ವಿವಾದದ ಮೂಲ ವಿಷಯಗಳು. ಇತ್ತೀಚೆಗೆ ಸರ್ಪಸಂಸ್ಕಾರಕ್ಕೆ ಸಂಬಂಧಿಸಿ ಮಠದ ಸಿಬ್ಬಂದಿ ಮೇಲೆ ಬೆದರಿಕೆ ಕ್ರಮ, ಪೊಲೀಸ್‌ ಪ್ರಕರಣ ಇತ್ಯಾದಿ ದಾಖಲಾಗಿದ್ದವು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !