ಶುಕ್ರವಾರ, ನವೆಂಬರ್ 27, 2020
20 °C

ಈಡೇರದ ಭರವಸೆ, ತಪ್ಪದ ಸಂಕಷ್ಟ

ಬಿ.ಜೆ.ಧನ್ಯಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಹೊಳೆ, ಹಳ್ಳ ದಾಟಲು ಕಾಲುಸಂಕಗಳೇ ಆಸರೆ. ‘ಬಿದ್ದೀರಾ ಜೋಕೆ’ ಎಂಬ ದುಃಸ್ಥಿತಿಯಲ್ಲಿರುವ ಈ ಕಾಲುಸಂಕಗಳಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. 

ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲ್ಲೂಕುಗಳಲ್ಲಿ ಕಾಲುಸಂಕಗಳು ಹೆಚ್ಚು ಇವೆ. ಮಳೆಗಾಲದಲ್ಲಿ ಓಡಾಡುವ ಸಂಕಷ್ಟ ಹೇಳತೀರದು.

ನರಸಿಂಹರಾಜಪುರ ತಾಲ್ಲೂಕಿನ ಕರಿಮನೆ ಗ್ರಾಮಸ್ಥರು ಕಾಲುಸಂಕ ಹಾದು ಕಿಚ್ಚಬ್ಬಿ ಹಳ್ಳ ದಾಟಬೇಕು.

‘ಹಿಂದೊಮ್ಮೆ ಗೊಬ್ಬರದ ಚೀಲ ಹೊತ್ತು ಕಾಲು ಸಂಕ ದಾಟುವಾಗ ಮೂವರು ಹಳ್ಳಕ್ಕೆ ಬಿದ್ದಿದ್ದರು. ನೀರು ಕಡಿಮೆ ಇದ್ದ ಕಾರಣ ಅನಾಹುತವಾಗಿರಲಿಲ್ಲ’ ಎಂದು ಪ್ರಕಾಶ್ ಹೇಳುತ್ತಾರೆ.

ಗಡಿಗೇಶ್ವರ ಸಮೀಪದ ಮಂಡಲಗಾರು ಭಾಗ ದಲ್ಲಿ 100ಕ್ಕೂ ಹೆಚ್ಚು ಜನರು ವಾಸವಾಗಿದ್ದು, ಅಲ್ಲಿಗೆ ಹೋಗಲು 45 ಅಡಿ ಉದ್ದದ ಕಾಲುಸಂಕವೇ ಗತಿ.

ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಅಬ್ಬಿಗುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಶೆಟ್ಟಿಹಡ್ಲು-ಅಬ್ಬಿಗುಂಡಿ ಹಳ್ಳಕ್ಕೆ ನಿರ್ಮಿಸಿರುವ ಕಾಲುಸಂಕವು ದುಃಸ್ಥಿತಿಯಲ್ಲಿದೆ.

ಶೃಂಗೇರಿ ತಾಲ್ಲೂಕಿನ ಭಲೇಕಡಿ ಗ್ರಾಮದಲ್ಲಿ ಉಂಬಳಕೆರೆ ಸಂಪರ್ಕ ಸೇತುವೆಗೆ ಕೈಪಿಡಿ ಇಲ್ಲ. ಭಲೇಕಡಿ ಸುತ್ತಮುತ್ತ ವಡ್ಡಿನಕಾರ್ಕಿ, ಕೂಡಿಗೆ, ದ್ಯಾವಂಟು, ಆವಂಟು ಹಳ್ಳಿಗಳಿವೆ. 

ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಸೇತುವೆ ದಾಟುವಾಗ ಮಹಿಳೆಯೊಬ್ಬರು ಕೊಚ್ಚಿ ಹೋದ ಘಟನೆ ಅಲ್ಲಿನ ಜನರ ಮನಸ್ಸಿ
ನಲ್ಲಿ ಹಸಿರಾಗಿದೆ. ದ್ಯಾವಂಟಿನಿಂದ ಕೊಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದ್ಯಾವಂಟು ಕಾಲುಸಂಕ, ವಡ್ಡನ ಕಾರ್ಕಿ ಕಾಲು ಇದೆ. ವರ್ಷಕ್ಕೊಮ್ಮೆ ಗ್ರಾಮಸ್ಥರು ಸೇರಿ ಕಾಲುಸಂಕ ನಿರ್ಮಿಸುತ್ತಾರೆ. ಮಳೆ ಜಾಸ್ತಿ ಸುರಿದರೆ ದ್ಯಾವಂಟು ಕಾಲುಸಂಕ ಪೂರ್ಣ ಜಲಾವೃತವಾಗುತ್ತದೆ. ಶೃಂಗೇರಿ ತಾಲ್ಲೂಕಿನಲ್ಲಿ ಎಂಟು ಕಾಲುಸಂಕಗಳು ಇವೆ.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಆಮ್ತಿ ಗ್ರಾಮದ ಗಿರಿಜನರು ಭದ್ರಾ ನದಿ ದಾಟಲು ತೆಪ್ಪವೇ ಗತಿಯಾಗಿದೆ.
ಕಿರುಸೇತುವೆಗಳನ್ನು ನಿರ್ಮಿಸಬೇಕು ಎಂದು ಹಲವು ಬಾರಿ ಮವನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಲ್ಲ ಎಂದು ಈ ಭಾಗದ ಜನರು
ಅಲವತ್ತುಕೊಳ್ಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು