ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಮ್ಮ ಜೊತೆ ಇತರರೂ ಬೆಳಯಲಿ ಎಂಬ ಸದಾಶಯದ ಮನಸ್ಸುಗಳ ಕೊರತೆ ಇದೆ'

ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ಆಶಯಕ್ಕೆ ಧಕ್ಕೆ ಬಂದಿತ್ತೇ, ಇದು ರಾಜೀನಾಮೆಗೆ ಕಾರಣವೇ?
Last Updated 8 ಜೂನ್ 2019, 11:24 IST
ಅಕ್ಷರ ಗಾತ್ರ

ಬೆಂಗಳೂರು: ಸದ್ಯದ ನಾವಿರುವ ಪ್ರಸ್ತುತದಲ್ಲಿ ಜ್ಞಾನಿಗಳು, ಅನುಭವ ಗಳಿಸಿದವರಿಗೆ ನನ್ನ ಜೊತೆ ಇತರರೂ ಬೆಳೆಯಲಿ ಎಂಬ ಸದಾಶಯ ಹೊಂದಿರುವ ಮನಸ್ಸಿನ ಕೊರತೆ ಇದೆ ಎಂದು ಹೇಳುವ ಮೂಲಕ ಅಣ್ಣಾಮಲೈ ರಾಜೀನಾಮೆಗೆ ಬೇರೆಯದ್ದೇ ಕಾರಣ ಇದೆ ಎಂಬುದನ್ನು ಮತ್ತೊಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಬಹಿರಂಗಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಡಿಸಿಪಿಯಾಗಿದ್ದ ಅಣ್ಣಾಮಲೈ ಅವರ ಹುಟ್ಟು ಹಬ್ಬಕ್ಕೆ ನಗರದಲ್ಲಿಯೇ ಪಶ್ಚಿಮ ವಿಭಾಗದಲ್ಲಿ ಡಿಸಿಪಿಯಾಗಿರುವ ರವಿ ಡಿ.ಚನ್ನಣ್ಣನವರ್ ಬರೆದ ಶುಭಾಶಯ ಪತ್ರದಲ್ಲಿ ಈ ರೀತಿ ಬರೆದಿದ್ದಾರೆ. ಆಮೂಲಕ ಇಲಾಖೆಯೇ ಬೇಡವೆಂದು ರಾಜೀನಾಮೆ ನೀಡಿರುವ ಅಣ್ಣಾಮಲೈ ಅವರ ನಡೆಗೆಬೇರೆಯೇ ಕಾರಣಗಳಿವೆ ಎಂಬುದನ್ನು ಸ್ನೇಹಿತರೂ ಆಗಿರುವ ರವಿ ಡಿ.ಚನ್ನಣ್ಣನವರ್ಎರಡು ಪುಟಗಳಶುಭಾಶಯ ಪತ್ರ ಬರೆದಿದ್ದಾರೆ.

ಪತ್ರದ ಪ್ರಮುಖ ಸಾಲುಗಳೆಂದರೆ, ಸದ್ಯ ನಾವಿರುವ ಈ ಪ್ರಸ್ತುತದಲ್ಲಿ ಜ್ಞಾನಿಗಳಿಗೆ ಕೊರತೆಯಿಲ್ಲ, ಶ್ರೀಮಂತರಿಗೂ ಕೊರತೆ ಇಲ್ಲ, ವಿಷಯವನ್ನರಿತವರಿಗೆ ಕೊರತೆ ಇಲ್ಲ, ಎಲ್ಲವನ್ನೂ ಬಲ್ಲವರಿಗೂ ಕೊರತೆಯೇ ಇಲ್ಲ. ಆದರೆ, ಅರ್ಜಿಸಿದ ಜ್ಞಾನ, ಪಡೆದ ತಿಳುವಳಿಕೆ, ಗಳಿಸಿದ ಅನುಭವಗಳನ್ನು ಸಮಾಜದ ಒಳಿತಿಗಾಗಿ ತಾನು ಬದುಕಿ ಇತರರು ಬದುಕೆಂಬ ಅಶಯ ಹೊತ್ತವರು, ನನ್ನ ಜೊತೆ ಇತರರೂ ಬೆಳೆಯಲಿ ಎಂಬ ಸದಾಶಯವನ್ನು ಹೊಂದಿರುವ ಮನಸ್ಸುಗಳ ಕೊರತೆ ಇದೆ. ನಾನು ಬೆಳೆಯದೇ ಹೋದರೂ ಪರವಾಗಿಲ್ಲ, ಇನ್ನೊಬ್ಬ ಬೆಳೆಯುತ್ತಿದ್ದಾನೆ, ಬದುಕುತ್ತಿದ್ದಾನೆ, ಅವನ ಪಾಡಿಗೆ ಅವನನ್ನು ಬಿಟ್ಟು ಬಿಡೋಣ ಎಂಬ ಔದಾರ್ಯದ ಕೊರತೆಯಿದೆ ಎಂದು ಹೇಳಿದ್ದಾರೆ.

'ಇಲ್ಲಿ ತಾನೂ ಬೆಳೆದು ಇತರರೂ ಬೆಳೆಯಲಿ ಎಂಬ ಸದಾಶಯ ಹೊಂದಿರುವ ಮನಸ್ಸುಗಳ ಕೊರತೆ ಇದೆ' ಎಂದರೆ ಅದು ಪೊಲೀಸ್ ಇಲಾಖೆಯಲ್ಲಿಯೇ ಇಂತಹ ಮನಸ್ಸುಗಳ ಕೊರತೆ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.ಅಣ್ಣಾಮಲೈ ಹಾಗೂ ರವಿ ಡಿ.ಚನ್ನಣ್ಣನವರ್ ಆತ್ಮೀಯ ಸ್ನೇಹಿತರು. ಯಾರುಹೇಗೆ ಎಂಬುದನ್ನು ಇಬ್ಬರೂ ಚರ್ಚಿಸಿಯೇ ಇರುತ್ತಾರೆ. ಈ ವಿಷಯವನ್ನು ಬಹಿರಂಗಪಡಿಸಿದರೆ ಅದು ಮತ್ತೊಂದು ಅಶಿಸ್ತು ಎಂದು ಪರಿಗಣಿಸಬಹುದು ಎಂದು ಇಬ್ಬರೂ ಚರ್ಚಿಸಿರುವ ಸಾಧ್ಯತೆ ಇದೆ.

ಇದೇ ಪುಟದಲ್ಲಿಮತ್ತೊಂದು ಪ್ರಮುಖ ಅಂಶವನ್ನೂ ರವಿ ಹೇಳಿದ್ದಾರೆ, ಅದು ಅಣ್ಣಾಮಲೈ ರಾಜಕೀಯ ಪ್ರವೇಶದ ಕುರಿತು ಇರುವ ಸಾಲು. 'ಇತರರಿಗಾಗಿ ಮಿಡಿಯುವ ಆ ಮನಸ್ಸು ನಿನ್ನಲ್ಲಿದೆ. ಎಲ್ಲಾ ವರ್ಗದ ಎಲ್ಲಾ ಹಂತದ ಜನರ ನಾಯಕ ನೀನಾಗಬೇಕೆಂಬುದು ನನ್ನ ಸದಾಶಯ' ಎಂದು ಹೇಳಿದ್ದಾರೆ. ಆ ಮೂಲಕ ಪೊಲೀಸ್ ಅಧಿಕಾರಿಗಳಿಗೂ, ರಾಜಕಾರಣಿಗಳಿಗೂ ನಾಯಕನಾಗು ಎಂದು ಬರೆಯುವ ಮೂಲಕಪರೋಕ್ಷವಾಗಿ ಬರವಣಿಗೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ,'ಈಗ ರಾಜ್ಯದ ಜನ ನಿನ್ನ ರಾಜೀನಾಮೆ ಅರಗಿಸಿಕೊಳ್ಳಲು ಶ್ರಮಪಡುತ್ತಿದ್ದಾರೆ. ರಾಜೀನಾಮೆ ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ, ಪೊಲೀಸ್ ಸೇವೆಯಲ್ಲಿ ಮುಂದುವರಿಯಬೇಕೆಂದು ಆಶಿಸುತ್ತಿದ್ದಾರೆ, ಅವರು ನೀನು ರಾಜೀನಾಮೆಯ ಬಗ್ಗೆ ಕೊಟ್ಟ ಕಾರಣಗಳನ್ನು ನಂಬಲೂ ಸಹ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಹೇಳಿರುವ ರವಿ ಡಿ.ಚನ್ನಣ್ಣನವರ್ ರಾಜೀನಾಮೆಯ ಹಿಂದೆ ಬೇರೆಯದ್ದೇ ಕಾರಣ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನು ಉಳಿದಂತೆ ಅಣ್ಣಾಮಲೈ ಅವರ ಪ್ರಾಮಾಣಿಕತೆ, ದಕ್ಷ, ನೇರ ನುಡಿಗಳ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. ಅವರ ಬರೆದಿರುವ ಸಾಲುಗಳು ಹೀಗಿವೆ. ಇಡೀ ಇಲಾಖೆಯ ತುಂಬಾ ನೀನು ಆವರಿಸಿದ್ದು, ಪ್ರೀತಿ, ಮಮಕಾರ, ಆತ್ಮೀಯತೆ, ಗೌರವಗಳಿಂದ ಪೊಲೀಸ್ ಇಲಾಖೆಯ ಸರ್ವ ಏಳಿಗೆಗೆ ಹಾಗೂ ಜನಪ್ರಿಯತೆಗೆ ಸಿಬ್ಬಂದಿಗಳೇ ಮೂಲ ಎಂಬುದನ್ನು ನೀನು ಅರಿತಿದ್ದೆ. ಅದು ಅತ್ಯಂತ ಶ್ರೇಷ್ಟ ಗುಣ. ಇಲಾಖೆಯನ್ನು ಬೆಳೆಸುತ್ತಿರುವುದು ಕೆಳ ಹಂತದ ಸಿಬ್ಬಂದಿ ಹಾಗೂ ಅವರ ಬೆವರಿನ ಪರಿಶ್ರಮ. ಅದಕ್ಕಾಗಿ ನಿನ್ನಲ್ಲೊಮ್ಮೆ ನನ್ನನ್ನು ಕಂಡಿದ್ದೆ. ಹಾಗಂತ ನಾನೂ ನಿನಗೆ ಸಾಟಿಯಿಲ್ಲ. ಅದೆಷ್ಟೋ ನನ್ನಂಥವರ ಒಟ್ಟು ಮೊತ್ತ ನೀನು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT