ಸಿಎಂ ಗ್ರಾಮ ವಾಸ್ತವ್ಯ ಒಳ್ಳೆಯ ಕೆಲಸ; ಈಶ್ವರಪ್ಪ ಪ್ರಶಂಸೆ

ಗುರುವಾರ , ಜೂನ್ 20, 2019
27 °C
‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ’

ಸಿಎಂ ಗ್ರಾಮ ವಾಸ್ತವ್ಯ ಒಳ್ಳೆಯ ಕೆಲಸ; ಈಶ್ವರಪ್ಪ ಪ್ರಶಂಸೆ

Published:
Updated:

ಬಾಗಲಕೋಟೆ: ‘ರಾಜಕೀಯದಲ್ಲಿ ನಮ್ಮ ಹವಾ ಇದ್ದಾಗ ಎಲ್ಲರಿಗೂ ಹೀರೋಗಳಾಗಿ ಕಾಣುತ್ತೇವೆ. ಇಲ್ಲದಿದ್ದಾಗ ವಿಲನ್ ಆಗುತ್ತೇವೆ. ಸಹಾಯ ಪಡೆದವರೂ ಆಗ ವಿರುದ್ಧ ಮಾತಾಡುತ್ತಾರೆ. ಹಾಗಾಗಿ ಸ್ಥಾನಮಾನ ಸಿಕ್ಕಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೊಯ್ಯುವ ಪ್ರಯತ್ನ ಮಾಡಬೇಕು ಆಗ ಒಳ್ಳೆಯದಾಗುತ್ತದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಶಾಸಕ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಶನಿವಾರ ಇಲ್ಲಿ ಗಮನ ಸೆಳೆದಾಗ ಈಶ್ವರಪ್ಪ ಮಾರ್ಮಿಕವಾಗಿ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವವನ್ನು ಟೀಕೆ ಮಾಡೊಲ್ಲ. ಅದೂ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಮಾಡುತ್ತಿರುವುದು ಒಳ್ಳೆಯ ಕೆಲಸ. ಅಲ್ಲಿಗೆ ಬಹುತೇಕ ಬಡವರ ಮಕ್ಕಳೇ ಬರುತ್ತಾರೆ. ಮೇಜು, ಕುರ್ಚಿ, ಕಟ್ಟಡ ಏನೂ ಇಲ್ಲದ ಪರಿಸ್ಥಿತಿ ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿದೆ. ಅಲ್ಲಿನ ವಾಸ್ತವ ಸ್ಥಿತಿ ಅರಿಯಲು ಸಿಎಂಗೆ ಇದು ನೆರವಾಗಲಿದೆ’ ಎಂದರು.

‘ಬಳ್ಳಾರಿಯಲ್ಲಿ ಸರ್ಕಾರದಿಂದ 1667 ಎಕರೆ ಜಮೀನು ಮಂಜೂರಾತಿ ಮಾಡಿಕೊಳ್ಳುವ ಒಪ್ಪಂದದಿಂದ ಜಿಂದಾಲ್ ಕಂಪೆನಿ ಈಗಲೇ ಹಿಂದೆ ಸರಿದರೆ ಸೂಕ್ತ. ಅದು ಅವರಿಗೇ ಗೌರವ ತರಲಿದೆ. ಮುಂದೆ ಬರುವ ಸರ್ಕಾರ ಖಂಡಿತವಾಗಿಯೂ ಅದನ್ನು ವಾಪಸ್ ಪಡೆಯಲಿದೆ’ ಎಂದರು.

‘ರಾಜ್ಯದಲ್ಲಿ ನಾವಾಗಿಯೇ ಸಮ್ಮಿಶ್ರ ಸರ್ಕಾರ ಬೀಳಿಸೊಲ್ಲ, ಬಿದ್ದ ನಂತರ ಕಾದು ನೋಡಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇವನ್ನೂ ಓದಿ... 

* ಗ್ರಾಮ ವಾಸ್ತವ್ಯ ನಾಟಕ ಬಿಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ 

ಸಿ.ಎಂ ವಾಸ್ತವ್ಯದ ನಂತರವೂ ಅಭಿವೃದ್ಧಿ ಕಾಣದ ಗ್ರಾಮ!

ಶೀಘ್ರವೇ ಸರ್ಕಾರಿ ಶಾಲೆಗಳಲ್ಲಿ ಸಿಎಂ ಗ್ರಾಮ ವಾಸ್ತವ್ಯ

* ಖರ್ಗೆ ಎಂಬ ಗಬ್ಬರ್‌ಸಿಂಗ್‌ನನ್ನು ಕೆಡವಿದ್ದೇವೆ: ಮಾಲೀಕಯ್ಯ ಗುತ್ತೇದಾರ ವ್ಯಂಗ್ಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !