ಬಬಲೇಶ್ವರ ಸಾವು: ನ್ಯಾಯಾಂಗ ತನಿಖೆಗೆ ಆಗ್ರಹ

ಬುಧವಾರ, ಜೂನ್ 19, 2019
24 °C

ಬಬಲೇಶ್ವರ ಸಾವು: ನ್ಯಾಯಾಂಗ ತನಿಖೆಗೆ ಆಗ್ರಹ

Published:
Updated:

ಶಿವಮೊಗ್ಗ: ಪೊಲೀಸ್‌ ವಶದಲ್ಲಿದ್ದಾಗಲೇ ಮೃತಪಟ್ಟ ಭದ್ರಾವತಿ ತಾಲ್ಲೂಕು ಆಗರದಳ್ಳಿ ಕ್ಯಾಂಪ್‌ನ ಬಬಲೇಶ್ವರ ಅವರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಸ್ವರಾಜ್ ಇಂಡಿಯಾ ಒತ್ತಾಯಿಸಿದೆ.

ಭದ್ರಾವತಿ ತಾಲ್ಲೂಕು ಹೊಳೆಹೊನ್ನುರು ಠಾಣೆ ಪಿಎಸ್‌ಐ ಮೇಘರಾಜ್ ಮತ್ತು ಅವರ ತಂಡ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಗುರುವಾರ ಮಧ್ಯಾಹ್ನವೇ ಬಬಲೇಶ್ವರ ಸೇರಿದಂತೆ ಏಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ವಿಚಾರಣೆ ನಡೆಸಿದ ನಂತರ ಅವರನ್ನು ಡಿಎಆರ್ ಮೈದಾನಕ್ಕೆ ಕರೆತಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎದುರೇ ಥಳಿಸಿದ್ದಾರೆ. ಆ ಸಮಯದಲ್ಲಿ ಬಬಲೇಶ್ವರ ಮೃತಪಟ್ಟಿದ್ದಾರೆ. ಈಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಿನಕ್ಕೊಂದು ವ್ಯತಿರಿಕ್ತ ಹೇಳಿಕೆ ನೀಡುತ್ತಾ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ವರಾಜ್ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್‌, ಮಾಲತೇಶ ಬೊಮ್ಮನಕಟ್ಟೆ, ಮಂಜುನಾಥ ನವುಲೆ ಒತ್ತಾಯಿಸಿದ್ದಾರೆ.

ಅಪರಾಧ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು. ಬಂಧಿಸಿದ ನಂತರ ನಿಯಮಗಳ ಪ್ರಕಾರ ನಡೆಸಿಕೊಳ್ಳಬೇಕು. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಇಂತಹ ಯಾವ ಕ್ರಮಕ್ಕೂ ಮುಂದಾಗದೆ ಪೊಲೀಸ್‌ ಮೈದಾನಕ್ಕೆ ಏಕೆ ಕರೆತಂದರು? ಆತನಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇತ್ತು ಎಂದು ಹೇಳುವ ಪೊಲೀಸರು ವಶಕ್ಕೆ ಪಡೆದ ಮೇಲೆ ಆತನಿಗೆ ವೈಧ್ಯಕೀಯ ಪರೀಕ್ಷೆಗೆ ಏಕೆ ಒಳಪಡಿಸಲಿಲ್ಲ? ಪ್ರಕರಣದ ನಂತರ ಆತನ ಜತೆ ಬಂಧಿಸಿದ್ದ ಇತರರು ಎಲ್ಲಿ ಹೋದರು? ಅವರನ್ನು ಏಕೆ ಬಿಟ್ಟರು? ಮೃತ ಬಬಲೇಶ್ ವಶಕ್ಕೆ ಪಡೆಯದೇ ಇದ್ದರೆ ಪೊಲೀಸ್‌ ಜೀಪ್‌ನಲ್ಲಿ ಶವ ಏಕೆ ತಂದರು? ಹಿಂದಿನ ರಾತ್ರಿ ಸೇರಿದ್ದ ಜನಸ್ತೋಮ ಬೆಳಿಗ್ಗೆ ದಿಢೀರ್ ಎಂದು ಏಕೆ ಕರಗಿತು ಎಂಬ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !