ರಾಣಿ ಎಲಿಜಬೆತ್‌ ಹುಟ್ಟುಹಬ್ಬಕ್ಕೆ ಭಾರತದ ಸಾಧಕರಿಗೆ ಆಹ್ವಾನ

ಶುಕ್ರವಾರ, ಜೂನ್ 21, 2019
24 °C
ಮೂವತ್ತು ಮಂದಿಗೆ ಅವಕಾಶ

ರಾಣಿ ಎಲಿಜಬೆತ್‌ ಹುಟ್ಟುಹಬ್ಬಕ್ಕೆ ಭಾರತದ ಸಾಧಕರಿಗೆ ಆಹ್ವಾನ

Published:
Updated:
Prajavani

ಲಂಡನ್‌ (ಪಿಟಿಐ): ಬ್ರಿಟನ್‌ ರಾಣಿ ಎಲಿಜಬೆತ್‌– 2 ಅವರ 93ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಭಾರತೀಯ ಮೂಲದ 30 ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ಶೈಕ್ಷಣಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಅವಕಾಶ ಒದಗಿಸಲಾಗಿದೆ.  ನಾಟಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯದಲ್ಲಿ ನೇತ್ರಶಾಸ್ತ್ರ ಮತ್ತು ವಿಷುವಲ್‌ ವಿಜ್ಞಾನ ವಿಷಯದ ಪ್ರಾಧ್ಯಾಪಕರಾಗಿರುವ ಹರ್ಮಿಂದರ್‌ ಸಿಂಗ್‌ ದುವಾ ಅವರನ್ನು ಆಹ್ವಾನಿಸಲಾಗಿದೆ.  ಇವರು, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗೆ ‘ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ (ಸಿಬಿಇ) ಕಮಾಂಡರ್ ಗೌರವಕ್ಕೂ ಪಾತ್ರರಾಗಿದ್ದಾರೆ. 

ಉದ್ಯಮಿಗಳಾದ ಭರತ್‌ ಕುಮಾರ್‌ ಹಂಸರಾಜ್‌ ಷಾ, ಸಮೀರ್‌ ಷಾ,  ಅರ್ನಬ್‌ ದತ್‌, ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ರೀನಾ ರೇಂಜರ್‌, ವೀಲ್‌ಚೇರ್‌ ಬಾಸ್ಕೆಟ್‌ ಬಾಲ್‌ ಕೋಚ್‌ ಹರ್‌ಜೀತ್‌ ಸಿಂಗ್‌ ಭಾನಿಯಾ, ಶೈಕ್ಷಣಿಕ ತಜ್ಞ ಅಮರ್ಜೀತ್‌ ಕೌರ್‌ ಚೀಮಾ, ಲಂಡನ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಸಂಸ್ಥಾಪಕ ಮತ್ತು ನಿರ್ದೇಶಕ ರಾಜೀಂದರ್‌ ಸಾಹ್ನಿ ಅವರಿಗೂ ಆಹ್ವಾನ ನೀಡಲಾಗಿದೆ.  ಒಟ್ಟು 1,073 ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !