ನಡಾಲ್‌–ಡೊಮಿನಿಕ್ ಹಣಾಹಣಿ

ಮಂಗಳವಾರ, ಜೂನ್ 18, 2019
24 °C
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಜೊಕೊವಿಚ್‌ಗೆ ಆಘಾತ

ನಡಾಲ್‌–ಡೊಮಿನಿಕ್ ಹಣಾಹಣಿ

Published:
Updated:
Prajavani

ಪ್ಯಾರಿಸ್‌ (ಎಎಫ್‌ಪಿ): ಪ್ರಮುಖ ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಸತತ ಎರಡು ಬಾರಿ ಗೆದ್ದ ವಿಶ್ವದ ಎರಡನೇ ಆಟಗಾರನಾಗುವ ಕನಸು ಕಂಡಿದ್ದ ಜೊಕೊವಿಚ್‌ ಅವರಿಗೆ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಆಘಾತ ನೀಡಿದರು.

ಶನಿವಾರ ಫಿಲಿಪ್‌ ಚಾಟ್ರಿಯರ್‌ ಅಂಗಣದಲ್ಲಿ ನಡೆದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮ್ಯಾರಥಾನ್‌ ಸೆಮಿಫೈನಲ್‌ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಆಟಗಾರ ಜೊಕೊವಿಚ್ 2–6, 6–3, 5–7, 7–5, 5–7 ರಿಂದ ಶರಣಾದರು.

ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಥೀಮ್‌ ಅವರು ಕೆಂಪು ಮಣ್ಣಿನಂಕಣದ ಪರಿಣತ ಆಟಗಾರ ನಡಾಲ್‌ ಅವರನ್ನು ಎದುರಿಸುವರು. ನಡಾಲ್‌ ಈಗಾಗಲೇ ದಾಖಲೆ 11 ಬಾರಿ ಇಲ್ಲಿ ಟ್ರೋಫಿ ಗೆದ್ದುಕೊಂಡಿದ್ದಾರೆ.

ಶುಕ್ರವಾರ ಮಳೆಯಿಂದ ಇದೇ ಪಂದ್ಯ ನಿಂತಿತ್ತು. ಈ ವೇಳೆ ಥೀಮ್‌ 6–2, 3–6, 3–1ರ ಮುನ್ನಡೆಯಲ್ಲಿದ್ದರು. ಶನಿವಾರ ಮುಂದುವರಿದ ಪಂದ್ಯದಲ್ಲಿ ಥೀಮ್‌  7–5ರಿಂದ ಮೂರನೇ ಸೆಟ್‌  ಗೆದ್ದುಕೊಂಡರು. ಆ ಬಳಿಕ ಜೊಕೊವಿಚ್‌ 7–5 ರಿಂದ ನಾಲ್ಕನೇ ಸೆಟ್‌ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಮಳೆ ಹಾಗೂ ಬಿರುಗಾಳಿಯ ಕಾರಣ ಪಂದ್ಯ ನಿಂತಿತು.

ಮಳೆ ನಿಂತ ಬಳಿಕ ಪಂದ್ಯ ಮುಂದುವರಿಸಲಾಯಿತು. ನಿರ್ಣಾಯಕ ಎನಿಸಿದ್ದ ಐದನೇ ಸೆಟ್‌ 7–5ರಿಂದ ಥೀಮ್‌ ಪಾಲಾಯಿತು. ಹಾಗೆಯೇ ಜೊಕೊವಿಚ್‌ ಪ್ರಶಸ್ತಿ ಓಟಕ್ಕೂ ತಡೆ ಬಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !