ಪೌರಕಾರ್ಮಿಕರಿಗೆ ಸದ್ಯದಲ್ಲೇ ಉಪಾಹಾರ

ಗುರುವಾರ , ಜೂನ್ 20, 2019
26 °C
ಬೆಳಗ್ಗಿನ ತಿಂಡಿ ಪೂರೈಸಲು ಕೊನೆಗೂ ಮುಂದೆ ಬಂದ ಗುತ್ತಿಗೆದಾರರು

ಪೌರಕಾರ್ಮಿಕರಿಗೆ ಸದ್ಯದಲ್ಲೇ ಉಪಾಹಾರ

Published:
Updated:
Prajavani

ಮೈಸೂರು: ಮೈಸೂರು ನಗರಿಯನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಬೆಳಗ್ಗಿನ ಉಪಾಹಾರ ಪೂರೈಸಲು ಕೊನೆಗೂ ಟೆಂಡರ್‌ದಾರರು ಮುಂದೆ ಬಂದಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯು ಈ ಹಿಂದೆ ಮೂರು ಬಾರಿ ಟೆಂಡರ್‌ ಕರೆದರೂ ಗುತ್ತಿಗಾರರು ತಿಂಡಿ ಪೂರೈಸಲು ಆಸಕ್ತಿ ತೋರಿರಲಿಲ್ಲ. ಟೆಂಡರ್‌ನಲ್ಲಿ ನಿಗದಿ ಮಾಡಿದ ₹ 20 ದರಕ್ಕೆ ಉಪಾಹಾರ ನೀಡಲು ಹಿಂದೇಟು ಹಾಕಿದ್ದರು. ಹೀಗಾಗಿ, ಎರಡೂವರೆ ವರ್ಷಗಳಿಂದ ಪೌರಕಾರ್ಮಿಕರು ಉಪಾಹಾರ ಭಾಗ್ಯದಿಂದ ವಂಚಿತರಾಗಿದ್ದರು. ಹೀಗಾಗಿ, ದರ ಹೆಚ್ಚಿಸುವಂತೆ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರ ಕೂಡ ಬರೆದಿತ್ತು. ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್‌ನಿಂದ ಕಲ್ಪಿಸಿದ್ದ ಉಪಾಹಾರದ ವ್ಯವಸ್ಥೆಯನ್ನೂ ಪೌರಕಾರ್ಮಿಕರು ಒಪ್ಪಿರಲಿಲ್ಲ.

‘ಹಿಂದೆ ಮೂರು ಬಾರಿ ಟೆಂಡರ್‌ ಕರೆದಾಗ ಯಾರೂ ಮುಂದೆ ಬರಲಿಲ್ಲ. ನಾಲ್ಕನೇ ಪ್ರಯತ್ನದಲ್ಲಿ ಟೆಂಡರ್‌ ಆಗಿದ್ದು, ಗುತ್ತಿಗೆದಾರರೊಬ್ಬರು ಕೊಟೇಷನ್‌ ಸಲ್ಲಿಸಿದ್ದಾರೆ. ಸದ್ಯದಲ್ಲೇ ಉಪಾಹಾರ ಪೂರೈಸಲಾಗುವುದು’ ಎಂದು ಪಾಲಿಕೆಯಲ್ಲಿ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ.ನಾಗರಾಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪಾಲಿಕೆಯ 65 ವಾರ್ಡ್‌ಗಳಲ್ಲಿ 1,645 ಗುತ್ತಿಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 530 ಕಾಯಂ ಪೌರಕಾರ್ಮಿಕರು ಇದ್ದಾರೆ. ಅಲ್ಲದೇ, ಒಳಚರಂಡಿ ಕಾರ್ಮಿಕರ ಸಂಖ್ಯೆ 212. ಹೆಚ್ಚಿನವರು ಬೆಳಿಗ್ಗೆ 5 ಗಂಟೆಗೆ ಕೆಲಸಕ್ಕೆ ಬರುತ್ತಾರೆ. ಮಧ್ಯಾಹ್ನದವರೆಗೆ ಸ್ವಚ್ಛತಾ ಕೆಲಸದಲ್ಲಿ ತೊಡಗುತ್ತಾರೆ.

ಪೌರಕಾರ್ಮಿಕರಿಗೆ ಉಪಾಹಾರ ನೀಡಲು ಮೂರು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಪಾಲಿಕೆಯ ಆಯಾ ವಾರ್ಡ್‌ಗಳಲ್ಲಿ ಬೆಳಗ್ಗೆ 9ರಿಂದ 10 ಗಂಟೆಗೆ ಉಪಾಹಾರ ವಿತರಣೆ ನಿರ್ಧರಿಸಲಾಗಿತ್ತು. ಆದರೆ, ಟೆಂಡರ್‌ದಾರರು ಮುಂದೆ ಬಂದಿರಲಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !