ಜಿಮ್ಮಿ,ಲಾಕಿ ದಾಳಿಗೆ ನಲುಗಿದ ಅಫ್ಗಾನ್: ನ್ಯೂಜಿಲೆಂಡ್‌ ಗೆ ಜಯ

ಬುಧವಾರ, ಜೂನ್ 19, 2019
28 °C

ಜಿಮ್ಮಿ,ಲಾಕಿ ದಾಳಿಗೆ ನಲುಗಿದ ಅಫ್ಗಾನ್: ನ್ಯೂಜಿಲೆಂಡ್‌ ಗೆ ಜಯ

Published:
Updated:

ಟಾಂಟನ್ (ಎಎಫ್‌ಪಿ): ವೇಗಿಗಳಾದ ಜಿಮ್ಮಿ ನೀಶಮ್ ಮತ್ತು ಲಾಕಿ ಫರ್ಗ್ಯು ಸನ್ ಅವರ ಪರಿಣಾಮಕಾರಿ ದಾಳಿಗೆ ನಲುಗಿದ ಅಫ್ಗಾನಿಸ್ತಾನ ತಂಡ ನ್ಯೂಜಿಲೆಂಡ್‌ ಎದುರು ಸೋಲು ಕಂಡಿದೆ. 

ಮಳೆ ಅಡ್ಡಿಪಡಿಸಿದ ಪಂದ್ಯ ಒಂದು ತಾಸು ತಡವಾಗಿ ಆರಂಭ ಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನದ ಆರಂಭಿಕ ಜೋಡಿ ಹಜರತ್ ಜಜಾಯ್ ಮತ್ತು ನೂರ್ ಅಲಿ ಜದ್ರಾನ್ 66 ರನ್‌ಗಳನ್ನು ಜೋಡಿಸಿದರು. ಆದರೆ ನಂತರ ತಂಡ ಕುಸಿತ ಕಂಡಿತು. ಲಾಕಿ ಮೂರು ಮತ್ತು ನೀಶಮ್ ಐದು ವಿಕೆಟ್ ಕಬಳಿಸಿದರು. ಹಶ್ಮತ್ ಉಲ್ಲಾ (59; 99 ಎಸೆತ, 9 ಬೌಂಡರಿ) ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿದರು.

ನ್ಯೂಜಿಲೆಂಡ್‌ ಪರವಾಗಿ ಕೇನ್‌ ವಿಲಿಯಮ್ಸ್‌ 79 ಹಾಗೂ ರಾಸ್‌ ಟೇಲರ್ 49 ರನ್‌ಗಳ ನೆರವಿನಿಂದ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿತು. 32 ಓವರ್‌ಗಳಲ್ಲಿ 173 ರನ್‌ಗಳ ಗುರಿ ಮುಟ್ಟಿದ ನ್ಯೂಜಿಲೆಂಡ್‌ 7 ವಿಕೆಟ್‌ಗಳ ಜಯ ದಾಖಲಿಸಿತು. 

ಸಂಕ್ಷಿಪ್ತ ಸ್ಕೋರ್: ಅಫ್ಗಾನಿಸ್ತಾನ: 41.1 ಓವರ್‌ಗಳಲ್ಲಿ 172 (ಹಜರತ್ ಜಜಾಯ್ 34, ನೂರ್ ಅಲಿ ಜದ್ರಾನ್ 31, ಹಶ್ಮತ್ ಉಲ್ಲಾ ಶಾಹಿದಿ 59; ಲಾಕಿ ಫರ್ಗ್ಯುಸನ್ 37ಕ್ಕೆ4, ಜಿಮ್ಮಿ ನೀಶಮ್ 31ಕ್ಕೆ5, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 14ಕ್ಕೆ1). 

ನ್ಯೂಜಿಲೆಂಡ್ : 32  ಓವರ್‌ಗಳಲ್ಲಿ 173/3 ( ಕೇನ್‌ ವಿಲಿಯಮ್ಸ್‌ 79 ಹಾಗೂ ರಾಸ್‌ ಟೇಲರ್ 49)

ಫಲಿತಾಂಶ: ನ್ಯೂಜಿಲೆಂಡ್‌ಗೆ ಜಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !