ಚಿಕ್ಕಬಳ್ಳಾಪುರ: ಹೊಂಡದಲ್ಲಿ ಮುಳುಗಿ ತಾಯಿ, ಮಕ್ಕಳ ಸಾವು

ಮಂಗಳವಾರ, ಜೂನ್ 18, 2019
23 °C

ಚಿಕ್ಕಬಳ್ಳಾಪುರ: ಹೊಂಡದಲ್ಲಿ ಮುಳುಗಿ ತಾಯಿ, ಮಕ್ಕಳ ಸಾವು

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಬಟ್ಟೆ ತೊಳೆಯಲು ನೀರಿನ ಹೊಂಡಕ್ಕೆ ಹೋದ ಗೃಹಿಣಿಯೊಬ್ಬರು ಇಬ್ಬರು ಮಕ್ಕಳ ಸಮೇತ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಿಪ್ಪೇನಹಳ್ಳಿಯ ನಾಗರಾಜ್ ಎಂಬುವರ ಪತ್ನಿ ವಿಜಯಾ (30) ಅವರು ತಮ್ಮ ಮಕ್ಕಳಾದ ಅಜಯ್ (10) ಧನಲಕ್ಷ್ಮಿ (8) ಸಮೇತ ಬೆಳಿಗ್ಗೆ 10ರ ಸುಮಾರಿಗೆ ಗ್ರಾಮದ ಹೊರವಲಯದಲ್ಲಿ ಇರುವ ತಮ್ಮ ಜಮೀನಿನ ಪಕ್ಕದ ಜಮೀನಿನಲ್ಲಿರುವ ನೀರಿನ ಹೊಂಡಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ಈ ವೇಳೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ನಾಗರಾಜ್ ಅವರು ಮಧ್ಯಾಹ್ನ 1ರ ಸುಮಾರಿಗೆ ಪತ್ನಿ, ಮಕ್ಕಳನ್ನು ಹುಡುಕಿಕೊಂಡು ಹೊಂಡದ ಬಳಿ ಹೋದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಬಟ್ಟೆ ತೊಳೆಯುವ ವೇಳೆ ಮಕ್ಕಳ ಪೈಕಿ ಯಾರೋ ಒಬ್ಬರು ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ನೀರಿಗಿಳಿದ ಇಬ್ಬರು ಕೂಡ ಮೇಲಕ್ಕೆ ಬರಲಾರದೆ ಹೊಂಡದಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದರು. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 5

    Sad
  • 0

    Frustrated
  • 0

    Angry

Comments:

0 comments

Write the first review for this !