ವರುಣನ ಕೃಪೆಗಾಗಿ ಇಂದು ಮಂಡಲ ಪೂಜೆ

ಸೋಮವಾರ, ಜೂನ್ 17, 2019
27 °C

ವರುಣನ ಕೃಪೆಗಾಗಿ ಇಂದು ಮಂಡಲ ಪೂಜೆ

Published:
Updated:

ದಾವಣಗೆರೆ: ವರುಣನ ಕೃಪೆಗಾಗಿ ಎಸ್‌.ಕೆ.ಪಿ ರಸ್ತೆಯ ಮಾರ್ಕಂಡೇಶ್ವರ ದೇವಾಲಯದಲ್ಲಿ ಮಂಡಲ ಪೂಜೆ ಪ್ರಯುಕ್ತ ಕ್ಷೀರಾಭಿಷೇಕ ಏರ್ಪಡಿಸಲಾಗಿದೆ.

ಅಭಿಷೇಕ ಮಾಡಿಸುವವರು ಒಂದು ಲೀಟರ್ ಹಾಲನ್ನು ನೀಡಬೇಕು. ಪೂಜೆ ಜೂನ್ 10ರಂದು ಬೆಳಿಗ್ಗೆ 8ರಿಂದ 9ರವರೆಗೆ ನಡೆಯಲಿದೆ.

ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಅಭಿಷೇಕ ಮಾಡುವವರು ಒಂದು ದಿವಸ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು ಎಂದು ಸಮಿತಿಯ ಅಧ್ಯಕ್ಷ ಪ್ರಭಾಕರ ಜೋಯಿಸರು ತಿಳಿಸಿದ್ದಾರೆ.

ಇಂದಿನಿಂದ ಯೋಗ ಶಿಬಿರ
ದಾವಣಗೆರೆ:
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ದೊಡ್ಡಬಾತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್‌ 10ರಿಂದ 19ರವರೆಗೆ ಯೋಗ ಶಿಬಿರ ನಡೆಯಲಿದೆ.

10 ದಿವಸ ನಡೆಯುವ ಯೋಗ ಶಿಬಿರದಲ್ಲಿ ಉಚಿತವಾಗಿ ಕಲಿಸಲಿದ್ದು, ಸ್ತ್ರೀ ಮತ್ತು ಪುರುಷರಿಗೆ ಅವಕಾಶವಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 8861019427 ಸಂಪರ್ಕಿಸಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !