ನೆರೆಹೊರೆ ಭೇಟಿ: ಚೀನಾ ಪ್ರಾಬಲ್ಯಕ್ಕೆ ತಡೆ?

ಶುಕ್ರವಾರ, ಜೂನ್ 21, 2019
24 °C
ಮೋದಿ ಎರಡನೇ ಅವಧಿಯ ಮೊದಲ ವಿದೇಶ ಪ್ರವಾಸ ಹಿಂದೆ ಸ್ಪಷ್ಟ ರಾಜತಾಂತ್ರಿಕ ಉದ್ದೇಶ

ನೆರೆಹೊರೆ ಭೇಟಿ: ಚೀನಾ ಪ್ರಾಬಲ್ಯಕ್ಕೆ ತಡೆ?

Published:
Updated:
Prajavani

ಕೊಲಂಬೊ (ರಾಯಿಟರ್ಸ್‌/ಪಿಟಿಐ): ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ವಿದೇಶ ಪ್ರವಾಸಕ್ಕೆ ಮಾಲ್ಡೀವ್ಸ್‌ ಮತ್ತು ಶ್ರೀಲಂಕಾವನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಸ್ಪಷ್ಟವಾದ ರಾಜತಾಂತ್ರಿಕ ಉದ್ದೇಶ ಇದೆ ಎಂದು ವಿಶ್ಲೇಷಿಸಲಾಗಿದೆ.

ದಕ್ಷಿಣ ಏಷ್ಯಾ ಭಾಗದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾವು ಇತ್ತೀಚಿನ ವರ್ಷಗಳಲ್ಲಿ ಭಾರಿ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ತಡೆ ಒಡ್ಡುವುದು ಕೂಡ ಮೋದಿ ಅವರ ಮಾಲ್ಡೀವ್ಸ್‌ ಮತ್ತು ಶ್ರೀಲಂಕಾ ಭೇಟಿಯ ಉದ್ದೇಶ ಎಂದು ಹೇಳಲಾಗಿದೆ. 

ಮಾಲ್ಡೀವ್ಸ್‌ ಮತ್ತು ಶ್ರೀಲಂಕಾದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಲೇ ಇದೆ. ಈ ಎರಡೂ ದೇಶಗಳ ಹಲವು ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾವು ಹೂಡಿಕೆ ಮಾಡಿದೆ. ಈ ದೇಶಗಳ ಜತೆಗೆ ನಿಕಟವಾದ ಸೇನಾ ಸಹಕಾರ ಹೊಂದಲು ಪ್ರಯತ್ನಿಸುತ್ತಿದೆ. ಆದರೆ, ವಿವಿಧ ಯೋಜನೆಗಳಿಗೆ ಚೀನಾ ಕೊಟ್ಟಿರುವ ಭಾರಿ ಮೊತ್ತದ ಸಾಲವು ಈ ದೇಶಗಳಿಗೆ ದೊಡ್ಡ ಹೊರೆಯಾಗಿಯೂ ಪರಿಣಮಿಸಿದೆ. 

ಮಾಲ್ಡೀವ್ಸ್‌ ಸಂಸತ್ತಿನಲ್ಲಿ ಶನಿವಾರ ಮಾತನಾಡುವಾಗ ಈ ವಿಚಾರವನ್ನು ಮೋದಿ ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದರು. ನೆರೆ ದೇಶಗಳಿಗೆ ಭಾರತ ನೀಡುವ ನೆರವು ಆ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ ಉದ್ದೇಶದ್ದಲ್ಲ. ಈ ದೇಶಗಳನ್ನು ದುರ್ಬಲಗೊಳಿಸುವುದಿಲ್ಲ, ಬದಲಿಗೆ ಸಶಕ್ತಗೊಳಿಸುವ ಗುರಿ ಹೊಂದಿದೆ ಎಂದಿದ್ದರು. 

ಚೀನಾದ ಪ್ರಯತ್ನಕ್ಕೆ ತಿರುಗೇಟು ನೀಡುವ ಯತ್ನವನ್ನು ಭಾರತ ಮಾಡುತ್ತಿದೆ. ‘ನೆರೆಹೊರೆಯೇ ಮೊದಲು’ ಎಂಬುದನ್ನು ತನ್ನ ವಿದೇಶಾಂಗ ನೀತಿಯ ಕೇಂದ್ರವಾಗಿ ಇರಿಸಿಕೊಂಡಿದೆ. 

ಎರಡೂ ದೇಶಗಳಲ್ಲಿ ದೊಡ್ಡ ಮೊತ್ತದ ಹೂಡಿಕೆಗೆ ಭಾರತವೂ ಉತ್ಸುಕವಾಗಿದೆ. ಕೊಲಂಬೊದಲ್ಲಿ ಬಂದರು ಟರ್ಮಿನಲ್‌ ನಿರ್ಮಾಣದ ಒಪ್ಪಂದಕ್ಕೆ ಕಳೆದ ತಿಂಗಳು ಭಾರತ ಮತ್ತು ಶ್ರೀಲಂಕಾ ಸಹಿ ಹಾಕಿವೆ. ಈ ಯೋಜನೆಯಲ್ಲಿ ಜಪಾನ್‌ನ ಸಹಭಾಗಿತ್ವವೂ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !