ಕೇರಳವೂ ಆಪ್ತ: ಮೋದಿಗೆ ತಿರುಗೇಟು

ಗುರುವಾರ , ಜೂನ್ 20, 2019
28 °C
ವಯನಾಡ್‌ ಮತದಾರರಿಗೆ ರಾಹುಲ್‌ ಕೃತಜ್ಞತೆ

ಕೇರಳವೂ ಆಪ್ತ: ಮೋದಿಗೆ ತಿರುಗೇಟು

Published:
Updated:
Prajavani

ತಿರುವನಂತಪುರ: ‘ವಾರಾಣಸಿಯಷ್ಟೇ ಕೇರಳವೂ ನನಗೆ ಪ್ರೀತಿಪಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಕ್ಕೆ ಯಾವುದೇ ಆಧಾರವಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಷ್ಟೇ ಅವರಿಗೆ ಹೆಚ್ಚು ಪ್ರಿಯ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ.

ತಾವು ಪ್ರತಿನಿಧಿಸುವ ವಯನಾಡ್‌ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಅವರು ಮೋದಿ ವಿರುದ್ಧ ಭಾನುವಾರವೂ ವಾಗ್ದಾಳಿ ಮುಂದುವರಿಸಿದರು. ‘ಕೇರಳದಲ್ಲಿ ಎಡ ಪಕ್ಷದ ಆಡಳಿತವಿದೆ. ಹೀಗಾಗಿ, ಉತ್ತರ ಪ್ರದೇಶದಂಥ ರಾಜ್ಯಗಳಿಷ್ಟೇ ಸಿಕ್ಕಷ್ಟೇ ಪ್ರಾಮುಖ್ಯವನ್ನು ಕೇರಳಕ್ಕೆ ಪ್ರಧಾನಿ ನೀಡುವುದಿಲ್ಲ’ ಎಂದರು.

‘ಆರ್‌ಎಸ್‌ಎಸ್‌ ಚಿಂತನೆಗಳನ್ನು ಒಪ್ಪದವರು ಭಾರತೀಯರೇ ಅಲ್ಲ ಎಂಬುದು ಮೋದಿ ಮತ್ತು ಬಿಜೆಪಿಯ ಅಭಿಮತ. ನರೇಂದ್ರ ಮೋದಿ ಅವರು ಎಂದಿಗೂ ದ್ವೇಷದ ರಾಜಕಾರಣಕ್ಕೇ ಹೆಚ್ಚಿನ ಒತ್ತು ನೀಡುತ್ತಾರೆ’ ಎಂದು ತರಾಟೆಗೆ ತಗೆದುಕೊಂಡರು.

ಶನಿವಾರ ಗುರುವಾಯೂರಿನಲ್ಲಿ ಮಾತನಾಡಿದ ಮೋದಿ, ‘ನಮಗೆ ಮತ ನೀಡಿದವರು, ನೀಡದವರು ಇಬ್ಬರೂ ನಮ್ಮವರೇ. ಕೇರಳ ಕೂಡಾ ನನಗೆ ವಾರಾಣಸಿಯಷ್ಟೇ ಆಪ್ತವಾದ ತಾಣ’ ಎಂದು ಹೇಳಿದ್ದರು.

‘ರಾಜಕಾರಣವನ್ನು ಹೊರತುಪಡಿಸಿ ನಾನು ಕೇರಳದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡುತ್ತೇನೆ’ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು. ಈ ಭಾಗದ ಸಮಸ್ಯೆಗಳ ಕುರಿತ ಚರ್ಚೆಗಾಗಿ ಸಿಪಿಎಂ ಶಾಸಕ ತಮ್ಮನ್ನು ಭೇಟಿಯಾಗಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು.

ಜನರು ಕ್ಷೇತ್ರದ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಲು ನೆರವಾಗುವಂತೆ ಶೀಘ್ರದಲ್ಲಿಯೇ ಕಚೇರಿ ತೆರೆಯಲಾಗುವುದು ಎಂದು ಭರವಸೆ ನೀಡಿದರು.

ಪ್ರವಾಸದ ಅವಧಿಯಲ್ಲಿ ಅವರು ವಿವಿಧ ಸಂಘಟನೆಗಳ ಜೊತೆಗೆ ಚರ್ಚಿಸಿದರು. ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ರಾತ್ರಿಯ ವೇಳೆ ಸಂಚಾರ ನಿರ್ಬಂಧ ತೆರವು ಸೇರಿ ವಿವಿಧ ಬೇಡಿಕೆಗಳನ್ನು ಅವರ ಗಮನಕ್ಕೆ ತರಲಾಯಿತು.

ತಮ್ಮನ್ನು ಆಯ್ಕೆ ಮಾಡಿದ್ದ ವಯನಾಡ್‌ ಜನರಿಗೆ ಕೃತಜ್ಞತೆ ಸಲ್ಲಿಸಲು ರಾಹುಲ್‌ ಕೈಗೊಂಡಿದ್ದ ಮೂರು ದಿನಗಳ ಯಾತ್ರೆ ಭಾನುವಾರ ಕೊನೆಗೊಂಡಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !