ಮತ್ತೆ ಸೂಪರ್‌ ಕಂಪ್ಯೂಟರ್‌ ಖರೀದಿ

ಶುಕ್ರವಾರ, ಜೂನ್ 21, 2019
22 °C
ಹವಾಮಾನ ಮುನ್ಸೂಚನೆ ಮಾಹಿತಿಗೆ ಅನುಕೂಲ: 8 ಪಟ್ಟು ಹೆಚ್ಚು ಸಾಮರ್ಥ್ಯ

ಮತ್ತೆ ಸೂಪರ್‌ ಕಂಪ್ಯೂಟರ್‌ ಖರೀದಿ

Published:
Updated:
Prajavani

ನವದೆಹಲಿ (ಪಿಟಿಐ): ಹವಾಮಾನ ಮುನ್ಸೂಚನೆಯನ್ನು ಮತ್ತಷ್ಟು ಸುಧಾರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಇನ್ನೂ ಎರಡು ಸೂಪರ್‌ ಕಂಪ್ಯೂಟರ್‌ಗಳನ್ನು ಖರೀದಿಸಲು ಉದ್ದೇಶಿಸಿದೆ.

ಸದ್ಯ ಲಭ್ಯವಿರುವ ಸೂಪರ್‌ ಕಂಪ್ಯೂಟರ್‌ಗಳಿಗಿಂತ ಎಂಟು ಪಟ್ಟು ಹೆಚ್ಚು ಸಾಮರ್ಥ್ಯವನ್ನು ಇವು ಹೊಂದಿವೆ. ಜತೆಗೆ ಅತಿ ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸಲಿವೆ.

ಭೂ ವಿಜ್ಞಾನ ಖಾತೆ ಸಚಿವ ಹರ್ಷವರ್ಧನ್‌  ಅವರು ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಸೂಪರ್‌ ಕಂಪ್ಯೂಟರ್‌ಗಳ ಅಗತ್ಯತೆ ಬಗ್ಗೆ ವಿವರಿಸಲಾಗಿದೆ. ಈ ಕಂಪ್ಯೂಟರ್‌ಗಳಿಂದ ಸಾಧ್ಯವಾದಷ್ಟು ಮುಂಚಿತವಾಗಿಯೇ ಮತ್ತು ನಿಖರವಾಗಿಯೇ ಹವಾಮಾನ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್‌ ತಿಳಿಸಿದ್ದಾರೆ.

ಸದ್ಯ ಎರಡು ಸೂಪರ್‌ ಕಂಪ್ಯೂಟರ್‌ಗಳು: ಸದ್ಯ ಭೂ ವಿಜ್ಞಾನ ಸಚಿವಾಲಯ ಹವಾಮಾನ ಮುನ್ಸೂಚನೆಗಾಗಿ ಎರಡು ಸೂಪರ್ ಕಂಪ್ಯೂಟರ್‌ಗಳನ್ನು ಹೊಂದಿದೆ. ನೊಯಿಡಾದಲ್ಲಿರುವ ಮಧ್ಯಮ ವ್ಯಾಪ್ತಿ ಹವಾಮಾನ ಮುನ್ಸೂಚನೆ ರಾಷ್ಟ್ರೀಯ ಕೇಂದ್ರ (ಎನ್‌ಸಿಎಂಆರ್‌ಡಬ್ಲ್ಯೂಎಫ್‌) ಮತ್ತು ಪುಣೆಯಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನ
ಸಂಸ್ಥೆಯಲ್ಲಿ (ಐಐಟಿಎಂ) ಈ  ಕಂಪ್ಯೂಟರ್‌ಗಳಿವೆ. ಈ ಎರಡು ಕಂಪ್ಯೂಟರ್‌ಗಳ ಒಟ್ಟು ಸಾಮರ್ಥ್ಯ ಕೇವಲ 10 ಪೆಟಾಫ್ಲಾಪ್ಸ್‌.  ಈ ಸಂಸ್ಥೆಗಳಲ್ಲಿಯೇ ಹೊಸ ಕಂಪ್ಯೂಟರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !