ಹೇರಳ ನೀರಿನ ನಿರೀಕ್ಷೆಯಲ್ಲಿ ರೈತರು

ಗುರುವಾರ , ಜೂನ್ 20, 2019
26 °C

ಹೇರಳ ನೀರಿನ ನಿರೀಕ್ಷೆಯಲ್ಲಿ ರೈತರು

Published:
Updated:
Prajavani

ದಾಬಸ್ ಪೇಟೆ: ಕೆಲ ದಿನಗಳಿಂದ ಸೋಂಪುರ ಹೋಬಳಿಯಾದ್ಯಂತ ಬೀಳುತ್ತಿರುವ ಮಳೆಯಿಂದ ಇಲ್ಲಿನ ಕೆರೆ ಹೊಂಡಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ.

ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಜಾನುವಾರುಗಳಿಗೆ ನೀರಿನ ಕೊರತೆ ನಿವಾರಣೆಯಾಗಿದೆ. ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ಹೇರಳ ನೀರು ತುಂಬಿಕೊಳ್ಳುವ ಆಶಾಭಾವ ಮೂಡಿದೆ.

ಮಾದೇನಹಳ್ಳಿ, ಇಮಚೇನಹಳ್ಳಿ, ನಿಜಗಲ್ ಕೆಂಪೋಹಳ್ಳಿ, ರಾಯರಪಾಳ್ಯ, ಬಿಲ್ಲಿನಕೋಟೆ, ಕಂಬಾಳು, ನಿಡವಂದ, ಹಳೇನಿಜಗಲ್, ದೇವರಹೊಸಹಳ್ಳಿ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ಬಿರುಸುಗೊಂಡರೆ ಇನ್ನಷ್ಟು ನೀರು ಸಂಗ್ರಹವಾಗುವ ಲಕ್ಷಣಗಳಿವೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ 2017ರಲ್ಲಿ 15 ಲಕ್ಷ ವೆಚ್ಚದಲ್ಲಿ ಕೆರೆಪಾಳ್ಯ ಬುಗಡಿಹಳ್ಳಿಯ ಕೆರೆಯನ್ನು ಅಭಿವೃದ್ಧಿಪಡಿಸಿದ್ದರು.

’ಈ ಬಾರಿಯ ಮಳೆಯಿಂದ ಜಲಮೂಲಕ್ಕೆ ನೀರು ಬಂದಿದೆ. ನೂರಾರು ಎಕರೆಗೆ ನೀರು ಒದಗಿಸಬಹುದಾಗಿದೆ. ಅಂತರ್ಜಲ ಮಟ್ಟ ವೃದ್ಧಿಸುವ ಮೂಲಕ ಬತ್ತಿರುವ ಕೊಳವೆಬಾವಿಗಳಿಗೆ ಮರುಜೀವ ಸಿಕ್ಕಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಹೇಳಿದರು.

ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರವು ಕುಮುದ್ವತಿ ನದಿ ಪುನಶ್ಚೇತನ ಯೋಜನೆಯಡಿ ನರಸೀಪುರ, ಹೆಗ್ಗುಂದ, ಇಮ
ಚೇನಹಳ್ಳಿ, ಕಂಬಾಳು, ಕಾಸರಘಟ್ಟ, ಕೆರೆಕತ್ತಿಗನೂರು ಗ್ರಾಮಗಳ ಕೆರೆಗಳಲ್ಲಿ 33 ಅಡಿ ಉದ್ದ ಹಾಗೂ ಎಂಟೂವರೆ ಅಡಿ ಆಳದ ಹೊಂಡ
ಗಳನ್ನು ನಿರ್ಮಾಣ ಮಾಡಿದೆ. ಅದರ ಮಧ್ಯಭಾಗದಲ್ಲಿ ಇಂಗುಬಾವಿ ನಿರ್ಮಾಣ ಮಾಡಿರುವುದರಿಂದ ಅಂತರ್ಜಲ ವೃದ್ಧಿಯಾಗುತ್ತಿದೆ. ಮಳೆಯಿಂದಾಗಿ ಹೊಂಡಗಳು ತುಂಬಿ ನಳನಳಿಸುತ್ತಿವೆ.

‘ಇತ್ತೀಚಿನ ವರ್ಷಗಳಲ್ಲಿ ಸೋಂಪುರ ಹೋಬಳಿಯ ಬಹುತೇಕ ಕೆರೆಗಳು ಬತ್ತಿವೆ. ಮಳೆಗಾಲದಲ್ಲಿ ಕೆಲ ಕೆರೆಗಳಿಗೆ ನೀರು ಬರುತ್ತದೆ. ಆದರೆ, ಹೂಳು ತುಂಬಿಕೊಂಡು, ಅಡ್ಡಾದಿಡ್ಡಿಯಾಗಿ ಮಣ್ಣು ಎತ್ತಿರುವ ಕಾರಣ ಹಾಗೂ ಬೇಲಿಗಿಡಗಳು ಬೆಳೆದು ನಿಂತಿರುವುದರಿಂದ ನೀರು ನಿಲ್ಲುತ್ತಿರಲಿಲ್ಲ. ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರು ಸಿಗದೆ, ಅಂತರ್ಜಲ ಮಟ್ಟವು ಸಾವಿರ ಅಡಿಗಳಿಗೂ ಅಧಿಕ ಆಳಕ್ಕೆ ಕುಸಿದಿದೆ. ನೀರು ಬಂದಿರುವುದು ಸ್ವಲ್ಪ ನೆಮ್ಮದಿ ತರಿಸಿದೆ’ ಎಂದು ನರಸೀಪುರದ ವಿಜಯ್ ಕುಮಾರ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !