ಕುಂಬಾರಹಳ್ಳಿ ಕೆರೆಗೂ ಜೀವಕಳೆ

ಗುರುವಾರ , ಜೂನ್ 20, 2019
24 °C

ಕುಂಬಾರಹಳ್ಳಿ ಕೆರೆಗೂ ಜೀವಕಳೆ

Published:
Updated:
Prajavani

ಹೆಸರಘಟ್ಟ: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಂಬಾರಹಳ್ಳಿ ಗ್ರಾಮದ ಕೆರೆಯಲ್ಲಿ ಒಂದೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.

ಆರು ತಿಂಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದೊಡ್ಡಬಳ್ಳಾಪುರ ಘಟಕವು ‘ನಮ್ಮೂರು ನಮ್ಮ ಕೆರೆ ಪುನಶ್ಚೇತನ’ ಯೋಜನೆ ಅಡಿಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿತ್ತು. ಕೆರೆಯ ಅಂಗಳದಲ್ಲಿ ಬೆಳೆದಿದ್ದ ಕುರುಚಲು ಗಿಡಗಳನ್ನು, ಹೂಳನ್ನು ತೆಗೆಯಲಾಗಿತ್ತು. ದಡದಲ್ಲಿ ಹೊಂಗೆ, ಹಲಸು, ಬೇವಿನ ಸಸಿಗಳನ್ನು ನೆಡಲಾಗಿತ್ತು. ಈ ಎಲ್ಲ ಶ್ರಮಗಳ ಫಲವಾಗಿ ಈಗ ಕೆರೆಯಲ್ಲಿ ನೀರು ಸಂಗ್ರಹವಾಗಿದೆ.

‘ಗ್ರಾಮಾಭಿವೃದ್ಧಿ ಯೋಜನೆಯು ನಗರದ ಗ್ರಾಮಾಂತರ ಪ್ರದೇಶದಲ್ಲಿ ತಲಾ ₹10 ಲಕ್ಷಗಳ ವೆಚ್ಚದಲ್ಲಿ ನೂರು ಕೆರೆಗಳನ್ನು ಅಭಿವೃದ್ಧಿಪಡಿಸಿತ್ತು. ಮಳೆಗಾಲದಲ್ಲಿ ಸಂಗ್ರಹವಾದ ನೀರು ಬೇಸಿಗೆ ಕಾಲದಲ್ಲೂ ಇರುವಂತೆ ಕೆರೆಯನ್ನು ಹೊಸ ವಿನ್ಯಾಸದಿಂದ ರೂಪುಗೊಳಿಸುವುದು ಈ ಯೋಜನೆಯ ಉದ್ದೇಶ. ಹೆಸರಘಟ್ಟ ಹೋಬಳಿಯಲ್ಲಿ 41 ಎಕರೆ ವಿಸ್ತಾರದಲ್ಲಿರುವ ಕುಂಬಾರ
ಹಳ್ಳಿ ಕೆರೆಯನ್ನು ಆಯ್ಕೆ ಮಾಡಿಕೊಂಡು ತಿಂಗಳ ಅವಧಿಯಲ್ಲೇ ಪುನಶ್ಚೇತನ ಮಾಡಲಾಯಿತು’ ಎಂದು ಯೋಜನಾಧಿಕಾರಿ ವಸಂತ ಸಾಲಿಯಾನ್‌ ತಿಳಿಸಿದರು.

‘ಕೆರೆಯಲ್ಲಿದ್ದ ಫಲವತ್ತಾದ ಮಣ್ಣನ್ನು ರೈತರ ತೋಟಗಳಿಗೆ ನೀಡಲಾಗಿದೆ. ಇದರಿಂದ ಅವರ ತೋಟದಲ್ಲಿದ್ದ ಬೆಳೆಗಳು ಉತ್ತಮ ಫಸಲನ್ನು ನೀಡುತ್ತಿವೆ’ ಎಂದು ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯ ರಾಮಸ್ವಾಮಿ ಹರ್ಷ ಹೇಳಿದರು.

ಕೆರೆಯಲ್ಲಿ ನೀರು ನಿಂತರೆ ಅಂತರ್ಜಲದ ಮಟ್ಟವು ಹೆಚ್ಚಿ, ಗುಣಮಟ್ಟದ ಬೆಳೆಯನ್ನು ಬೆಳೆಯಬಹುದು. ಗ್ರಾಮದಲ್ಲಿ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಹೆಚ್ಚಾಗಿ ತರಕಾರಿ ಸಸಿಗಳನ್ನು ರೈತರು ಬೆಳೆಯುತ್ತಾರೆ.

ಈ ಕೆರೆಯಲ್ಲಿ ನೀರು ಸಂಗ್ರಹವಾದರೆ ತರಕಾರಿಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬಹುದು’ ಎಂದು ಸಮಿತಿಯ ಅಧ್ಯಕ್ಷರಾಗಿದ್ದ ಬೈಲಪ್ಪ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !