ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆಗೆ ಒತ್ತು ನೀಡಿ

ಬುಧವಾರ, ಜೂನ್ 19, 2019
23 °C
ನಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆಗೆ ಒತ್ತು ನೀಡಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಗ್ರಾಮೀಣ ಭಾಗದ ಜನತೆ ಹೈನುಗಾರಿಕೆಗೆ ಒತ್ತು ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು’ ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಎನ್.ಸಿ.ಭರಣಿ ವೆಂಕಟೇಶ್ ಹೇಳಿದರು.

ತಾಲ್ಲೂಕಿನ ನಾಯನಹಳ್ಳಿಯಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಾಲು ಉತ್ಪಾದಕ ಸಂಘಗಳು ಉಳಿಯಬೇಕಾದರೆ ರೈತರು ಗುಣಮಟ್ಟದ ಹಾಲು ನೀಡಬೇಕು. ಭೀಕರ ಬರಗಾಲದಲ್ಲಿಯೂ ನಮ್ಮ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ಹೈನುಗಾರಿಕೆಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ಜೀವನ ಮಾಡುತ್ತಿರುವವರು ಒಕ್ಕೂಟದಲ್ಲಿ ಹಾಲು ಉತ್ಪಾದಕರಿಗೆ ಇರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ರೈತರಿಗೆ ಒಳ್ಳೆಯ ತಳಿಯ ಹಸು ಸಾಕಬೇಕು ಎಂದು ಆಸೆ ಇರುತ್ತದೆ. ಆದರೆ ಅವುಗಳ ಪೋಷಣೆ ಮಾಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಹೆಚ್ಚು ಹಾಲು ನೀಡುವ ಹಸುಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಅವುಗಳ ನಿರ್ವಹಣಾ ವೆಚ್ಚ ಕೂಡ ದುಬಾರಿಯಾಗಿರುತ್ತದೆ. ಆದ್ದರಿಂದ ರೈತರು ತಮ್ಮ ಆರ್ಥಿಕ ಶಕ್ತಿ, ಮೂಲಸೌಕರ್ಯಕ್ಕೆ ಅನುಗುಣವಾಗಿ ಹಸುಗಳನ್ನು ಸಾಕಬೇಕು’ ಎಂದರು.

ನಾಯನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ನಾವು ಸಂಘಕ್ಕೆ ನೀಡುವ ಹಾಲು ಬೇರೆ ದೇಶಗಳಿಗೆ ರಫ್ತಾಗುತ್ತದೆ. ಆದ್ದರಿಂದ ರೈತರು ಪ್ರತಿ ಹಂತದಲ್ಲೂ ಶುಚಿತ್ವ ಕಾಪಾಡಿಕೊಳ್ಳಬೇಕು. ಹಾಲು ತರುವ ಪಾತ್ರೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

‘ನಮ್ಮ ಗ್ರಾಮದಲ್ಲಿ ಇವತ್ತು ಹೆಚ್ಚಿನ ಸಂಖ್ಯೆಯ ಜನರು ಹೈನುಗಾರಿಕೆ ನೆಚ್ಚಿ ಬದುಕುತ್ತಿದ್ದಾರೆ. ಹಾಲು ಪೌಷ್ಟಿಕ ಆಹಾರವಾಗಿದೆ. ರೈತರು ಕರೆದ ಹಾಲನ್ನೆಲ್ಲ ಸಂಘಕ್ಕೆ ಮಾರಾಟ ಮಾಡುವ ಬದಲು ತಾವು ಸೇವಿಸಬೇಕು.ಮಕ್ಕಳಿಗೂ ನೀಡಬೇಕು. ಅದರಿಂದ ಆರೋಗ್ಯ ಕೂಡ ಉತ್ತಮ ರೀತಿಯಲ್ಲಿರುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನೇಗೌಡ, ವಿಸ್ತರಣಾಧಿಕಾರಿ ಎನ್.ಸದಾಶಿನವ, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್, ಶ್ರೀನಿವಾಸರೆಡ್ಡಿ, ಸಂಘದ ನಿರ್ದೇಶಕರಾದ ವೆಂಕಟೇಶ್, ಮುನಿರಾಜು, ಮಂಜುನಾಥ್‌, ರಾಮಕೃಷ್ಣಪ್ಪ, ನಟೇಶ್, ಮುನಿನಾರಾಯಣಪ್ಪ, ಸಿಬ್ಬಂದಿ ಸಿ.ವಿ ಮೋಹನ್, ನಾರಾಯಣಸ್ವಾಮಿ, ಯಶೋಧ, ವೆಂಕಟೇಶ್ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !