ಸಾಹಿತ್ಯ ಕ್ಷೇತ್ರದ ಸವ್ಯಸಾಚಿ ಕಾರ್ನಾಡ

ಬುಧವಾರ, ಜೂನ್ 26, 2019
28 °C
ನಾಟಕಕಾರ, ಸಾಹಿತಿ ಗಿರೀಶ್‌ ಕಾರ್ನಾಡ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ

ಸಾಹಿತ್ಯ ಕ್ಷೇತ್ರದ ಸವ್ಯಸಾಚಿ ಕಾರ್ನಾಡ

Published:
Updated:
Prajavani

ಚಿಕ್ಕಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ನಾಟಕಕಾರ, ಸಾಹಿತಿ ಗಿರೀಶ್‌ ಕಾರ್ನಾಡ ಅವರಿಗೆ ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ‘ತಮ್ಮ ಸಾಹಿತ್ಯ ಕೃಷಿಯ ಮೂಲಕ ತಾಯಿ ಭುವನೇಶ್ವರಿ ಮುಕುಟಕ್ಕೆ ಜ್ಞಾನಪೀಠ ಪ್ರಶಸ್ತಿ ಅರ್ಪಿಸಿದ ಗಿರೀಶ್ ಕಾರ್ನಾಡ ಅವರು ಸಾಹಿತಿಯಾಗಿ, ನಾಟಕಕಾರರಾಗಿ, ಚಲನಚಿತ್ರ ಕ್ಷೇತ್ರದ ಸವ್ಯಸಾಚಿಯಾಗಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡು ಕನ್ನಡ ಕಣ್ಮಣಿಯಾಗಿದ್ದರು’ ಎಂದು ಹೇಳಿದರು.

‘ಕಾರ್ನಾಡರು ಹಳೇಗನ್ನಡ ಕಾವ್ಯ, ಜನಪದ ಕಥನ ಮತ್ತು ಐತಿಹಾಸಿಕ ಸಂದರ್ಭಗಳನ್ನು ಬಳಸಿಕೊಂಡು ರಚಿಸಿರುವ 8 ನಾಟಕಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ರಚನೆಗಳಾಗಿವೆ. ನಾಟಕ ರಂಗದಲ್ಲಿ ನಡೆಸಿದ ವಿಶಿಷ್ಟ ಪ್ರಯೋಗ ಅನನ್ಯವಾದದ್ದು. ತಮ್ಮ ಜಾತ್ಯತೀತ ನಿಲುವು ಮತ್ತು ಸರ್ವಧರ್ಮದ ಸಹಿಷ್ಣುತೆ ಬೇರೆಯವರಿಗೆ ಅಪಥ್ಯವಾದರೂ, ಅವರ ಮೇರು ವ್ಯಕ್ತಿತ್ವದ ನಡೆ, ನುಡಿ ಆದರ್ಶನೀಯ. ಇಂತಹ ದಿವ್ಯಚೇತನದ ಅಗಲಿಕೆ ನಾಡು–ನುಡಿಗೆ ಭರಿಸಲಾರದ ನಷ್ಟ’ ಎಂದು ವಿಷಾದಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್‌ ಮಾತನಾಡಿ, ‘ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವ ಮೂಲಕ ನಾಟಕಕಾರರಾಗಿ, ನಟರಾಗಿ, ಉತ್ತಮ ವಾಘ್ಮಿಗಳಾಗಿ ಮನೆಮಾತಾಗಿದ್ದ ಕಾರ್ನಾಡರ ನಿಧನ ರಾಜ್ಯವಲ್ಲದೇ ಇಡೀ ದೇಶದ ಸಾಂಸ್ಕೃತಿಕ ಲೋಕಕ್ಕೆ ಬಂದೆರಗಿದ ದೊಡ್ಡ ಆಘಾತ. ಅವರ ಸ್ಥಾನ ಮತ್ತೊಬ್ಬರಿಂದ ತುಂಬುವುದು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕಸಾಪ ತಾಲ್ಲೂಕು ಘಟಕದ ಸದಸ್ಯ ಎಸ್.ಎನ್.ಅಮೃತ್ ಕುಮಾರ್ ಮಾತನಾಡಿ, ‘ಕಾರ್ನಾಡರು ಶ್ರೇಷ್ಠ ನಾಟಕಕಾರ, ರಂಗಕರ್ಮಿ, ನಟ, ನಿರ್ದೇಶಕರಾಗಿ ದೇಶದಾದ್ಯಂತ ಖ್ಯಾತಿ ಗಳಿಸಿದ್ದರೂ, ತಮ್ಮ ಸಾವಿನಲ್ಲಿ ಯಾವುದೇ ರೀತಿಯ ವಿಜೃಂಭಣೆ ಬಯಸದೇ ಸಾಮಾನ್ಯ ಮನುಷ್ಯರಂತೆ ಉತ್ತರ ಕ್ರಿಯಾದಿಗಳನ್ನು ಬಯಸಿದ್ದು ಅವರ ಮೇರು ವ್ಯಕ್ತಿತ್ವದ ದೋತ್ಯಕ’ ಎಂದು ಹೇಳಿದರು.

ಸಾಹಿತಿಗಳಾದ ಎ.ಸಿ.ಇಂಧುಮತಿ, ಸರಸಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಚಂದ್ರಪ್ಪ, ಉಪನ್ಯಾಸಕರಾದ ನಳಿನಿ, ಸತೀಶ್ ಕುಮಾರ್, ಮಹೇಶ್ ಕುಮಾರ್, ರಾಕೇಶ್ ಅಗಸ್ಥ್ಯ ಫೌಂಡೇಷನ್‌ನ ವಸಂತ್ ಕುಮಾರ್, ಮಂಜುನಾಥ್, ಬಸವೇಶ್ವರ, ಶ್ರೀಧರ್, ಸತೀಶ್ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !