ಬುಧವಾರ, 10–6–1969

ಬುಧವಾರ, ಜೂನ್ 26, 2019
29 °C
ಬುಧವಾರ

ಬುಧವಾರ, 10–6–1969

Published:
Updated:

ಸಚಿವ ಮಟ್ಟದ ಆಯೋಗ ರಚನೆಗೆ ಭಾರತ– ಆಫ್ಘನಿಸ್ಥಾನ್‌ ನಿರ್ಧಾರ

ಕಾಬೂಲ್, ಜೂನ್ 10– ಪರಸ್ಪರ ಪ್ರಯೋಜನಕಾರಿ ಯೋಜನೆಗಳನ್ನು ರೂಪಿಸಲು ಹಾಗೂ ಅಧ್ಯಯನ ಮಾಡಲು ಸಚಿವ ಮಟ್ಟದ ಸಂಯುಕ್ತ ಆಯೋಗವೊಂದನ್ನು ರಚಿಸಬೇಕೆಂಬ ತಮ್ಮ ನಿರ್ಧಾರವನ್ನು ಭಾರತ ಮತ್ತು ಆಫ್ಘನಿಸ್ತಾನಗಳು ಇಂದು ಪ್ರಕಟಿಸಿವೆ.

ಚೋರ ನಾರಿ ಸ್ಪರ್ಶನಂ

ಬೆಂಗಳೂರು, ಜೂನ್ 10– ಸಮಯ ರಾತ್ರಿ ಎಂಟು ಗಂಟೆ. ನಗರದ ಗ್ರ್ಯಾಂಟ್ ರಸ್ತೆಯಲ್ಲಿ ಜನರ ಸಂಚಾರ ಹೆಚ್ಚು ಇರಲಿಲ್ಲ. ಮಹನೀಯರೊಬ್ಬರು ಒಬ್ಬರೇ ನಡೆದುಕೊಂಡು ಹೊರಟಿದ್ದರು.

ಅಷ್ಟರಲ್ಲಿ ಹಿಂದಿನಿಂದ ಯಾರೋ ಬಂದು ಅಪ್ಪಿಕೊಂಡರು. ಮಹನೀಯರು ಬೆಚ್ಚಿಬಿದ್ದರು. ‘ಕ್ಷಮಿಸಿ ನಿಮ್ಮನ್ನು ತಪ್ಪಾಗಿ ಭಾವಿಸಿದ್ದೆ’ ಎಂದು ಅಚ್ಚುಕಟ್ಟಾದ ಉಡುಗೆ ತೊಡುಗೆ ಧರಿಸಿದ್ದ ಯುವತಿ ಕ್ಷಮೆ ಕೋರಿದಳು. ‘ನನ್ನನ್ನು ಪ್ರಿಯತಮನೆಂದು ಭಾವಿಸಿರಬೇಕು’ ಎಂದು ಈ ಮಹನೀಯರು ಅವಳ ಕ್ಷಮೆಗೆ ಒಪ್ಪಿ ಸುಮ್ಮನಾದರು.

ಸ್ವಲ್ಪ ದೂರ ಹೋಗಿ ಹೋಟೆಲ್‌ವೊಂದರಲ್ಲಿ ಮಹನೀಯರು ತಿಂಡಿ ತಿಂದರು, ಬಿಲ್‌ ಕೊಡಲು ಜೇಬಿಗೆ ಕೈಹಾಕಿದಾಗ 440 ರೂಪಾಯಿ ಮಂಗಮಾಯ! ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ನಡೆಸಿದ್ದಾರೆ.

ಯು.ಪಿ.ಎಸ್.ಸಿ. ಪರೀಕ್ಷೆ– ಪ್ರಾದೇಶಿಕ ಭಾಷೆಗಳಿಗೆ ಭಾಗಶಃ ಅವಕಾಶ

ರಾಯಪುರ, ಜೂನ್ 10– ಅಕ್ಟೋಬರ್‌ನಲ್ಲಿ ನಡೆಯುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯು.ಪಿ.ಎಸ್.ಸಿ)
ಪರೀಕ್ಷೆಗಳಲ್ಲಿ ಎರಡು ವಿಷಯಗಳ (ಪ್ರಪಂಚ ಜ್ಞಾನ ಮತ್ತು ಪ್ರಬಂಧ ರಚನೆ) ಪ್ರಶ್ನೆ ಪತ್ರಿಕೆಗಳಿಗೆ ಯಾವುದೇ 15 ಭಾರತೀಯ ಭಾಷೆಗಳಲ್ಲಾದರೂ ಉತ್ತರ ಬರೆಯುವ ಸ್ವಾತಂತ್ರ್ಯವಿರುತ್ತದೆ ಎಂದು ಕೇಂದ್ರ ಗೃಹಶಾಖೆ ಸ್ಟೇಟ್ ಸಚಿವ ವಿದ್ಯಾಚರಣ್ ಶುಕ್ಲ ಇಂದು ಇಲ್ಲಿ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !