ಕೆಎಸ್‌ಟಿ ಟ್ಯಾಕ್ಸು!

ಭಾನುವಾರ, ಜೂನ್ 16, 2019
22 °C

ಕೆಎಸ್‌ಟಿ ಟ್ಯಾಕ್ಸು!

Published:
Updated:
Prajavani

‘ಇದೇನ್ಲಾ, ಬಿಬಿಎಂಪಿಯೋರು ಆಸ್ತಿ ತೆರಿಗೆ ಜಾಸ್ತಿ ಮಾಡ್ತಾರಂತೆ?’ ಅಂದ್ರು ತುರೇಮಣೆ. ‘ಹೂನ್ಸಾರ್ ವಿದ್ಯುತ್ ದರ, ಬಸ್ ದರ, ನೀರಿನ ದರ ಏರಿಸ್ತಾರಂತೆ! ಈ ಇಲಾಖೆಗಳು ನಷ್ಟದಲ್ಲವೆ ಅಂತ ರೇಟು ಏರಿಸಿದ್ರೆ ಹೆಂಗೆ ಸಾರ್? ವಿದ್ಯುತ್, ನೀರು, ಬಸ್ ಸರ್ವೀಸ್ ಎಲ್ಲಾ ಸೇವೆಗಳಲ್ಲವಾ ಸಾರ್! ಕಾಮನ್‌ಸೆನ್ಸು ಬ್ಯಾಡವ್ರಾ! ಹಿಂಗೆ ತಾರಾಮಾರ ಏರಿಸಿಬುಟ್ಟರೆ ಬದುಕದೆಂಗೆ’ ಅಂತಂದೆ.

‘ಇದು ಕೆಎಸ್‍ಟಿ ಟ್ಯಾಕ್ಸು ಕಣಪ್ಪಾ! ಅರ್ಥ ಮಾಡಿಕೋಬೇಕು’ ಅಂದರು ತುರೇಮಣೆ. ‘ಇದೇನ್ಸಾರ್ ಹಿಂಗಂದೀರಿ ಕೆಎಸ್‍ಟಿ ಟ್ಯಾಕ್ಸು ಹೋಗಿ 15 ವರ್ಷಾಯ್ತಲ್ಲಾ’.

‘ಲೋ ಬಕರಾ ಇದು ಕುಮಾರಸ್ವಾಮಿ ಟ್ಯಾಕ್ಸು ಕಣೋ!’ ಅಂದ್ರು ತುರೇಮಣೆ. ‘ಹೋಗ್ಲಿ ಬಿಡಿ, ಇನ್ನೇನು ಜಾಸ್ತಿಯಾಗದೆ ಹೇಳಿ ಸಾರ್?’ ಅಂತ ಕೇಳಿದೆ.

‘ನೋಡೋ ಈಗ ಬೀಳ್ತದೆ, ಆಗ ಬೀಳ್ತದೆ ಅಂತ ಟೆನ್ಶನ್ ಆಗಿ ಯೆಡೂರಪ್ಪಾರ ಬಿ.ಪಿ ಜಾಸ್ತಿ ಆಗದೆ. ಎಂಎಲ್‍ಎಗಳ ರೇಟು ಜಾಸ್ತಿಯಾಗದೆ. ಅವರ ಆಸ್ತಿ ಜಾಸ್ತಿಯಾಗದೆ. ಸರ್ಕಾರಿ ರಜಾ ಜಾಸ್ತಿ ಆಗದೆ. ಅನ್‌ಫಿಟ್ಟುಗಳು-ನೀರು
ಗಂಟಿಗಳು ಜಾಸ್ತಿಯಾಗವರೆ. ತರಕಾರಿ ರೇಟು ಜಾಸ್ತಿಯಾಗದೆ’.

‘ಆಯ್ತು ಸಾರ್ ಇಳಿದಿರದೇನು?’ ಅಂದೆ. ‘ಜನಸಾಮಾನ್ಯರಾದ ನನ್ನ-ನಿನ್ನ ಬೆಲೆ ಬುಟ್ಟರೆ ಇನ್ನೇನು ಇಳಿದಾತೋ!’ ಅಂದರು ತುರೇಮಣೆ. ಆಯ್ತು ಅಂತ ವಿಷಯ ಬದಲಾವಣೆ ಮಾಡಿದೆ.

‘ಸರಿ ಸಾರ್, ಈಗ ಮೈತ್ರಿ ಎಂಎಲ್‍ಎಗಳು ನಾನು ಮಂತ್ರಿಯಾಯ್ತಿನಿ, ನಾನ್ಯಾಕೆ ಆಗಬಾರ್ದು, ನಾನು ಅವನಿಗಿಂತಾ ಏನು ಕಮ್ಮಿ, ನಾನೂ ರೇಸಲ್ಲಿದ್ದೀನಿ ಅಂತಾ ನುಲಿತಾವರಲ್ಲ ಇದಕ್ಕೇನು ಪರಿಹಾರ?’ ಅಂತ ಕೇಳಿದೆ.

‘ನೋಡ್ಲಾ ಇದಕ್ಕೆ ಒಂದೇ ದಾರಿ. ಸಿ.ಎಂ-ಮಂತ್ರಿ ಪೋಸ್ಟಿಗೆ ಆನ್‍ಲೈನ್ ಬಿಡ್ಡಿಂಗ್ ಮಡಗಬೇಕು. ಯಾರು ಜಾಸ್ತಿ ಕೂಗ್ತಾರೋ ಅವರಿಗೆ ಮಂತ್ರಿ ಪೋಸ್ಟು! ಸರ್ಕಾರಕ್ಕೂ ಆದಾಯ, ಜನಶೇವೆ ಮಾಡಬಹುದು! ರೈತರ ಸಾಲಾನೂ ಮನ್ನಾ ಮಾಡಬಹುದು. ರಾ.ರೆಡ್ಡಿ
ಗಳಿಗೂ ಖುಷಿ! ಬ್ಯಾಗ್ ಸಾಯೇಬ್ರೂ ಇಲ್ಲೇ ಉಳಕಂತರೆ! ಕಮಲವೆಲ್ಲಾ ಕೈಗೆ ಬಂದು ದಳವಾಗಬಹುದು! ಏನಂತೀಯಾ?’ ಅಂದ್ರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !