ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆಗೆ ಸಲಹೆ

ಬುಧವಾರ, ಜೂನ್ 26, 2019
23 °C
ಉನ್ನತ ಶಿಕ್ಷಣ– ನಿಯಂತ್ರಣ ವ್ಯವಸ್ಥೆ ಇರಲಿ: ಶಿಕ್ಷಣ ನೀತಿಯಲ್ಲಿ ಉಲ್ಲೇಖ

ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆಗೆ ಸಲಹೆ

Published:
Updated:

ಬೆಂಗಳೂರು: ಶಿಕ್ಷಣದ ಕನಸಿಗೆ ಒಬ್ಬ ಯಜಮಾನ ಬೇಕೇ ಬೇಕು. ಅದಕ್ಕಾಗಿ ದೇಶದ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ಆಯೋಗ ರಚಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿಪಾದಿಸಿದೆ.

ಶಿಕ್ಷಣದ ಎಲ್ಲಾ ಹಂತಗಳು, ಎಲ್ಲಾ ಅಂಶಗಳ ಬಗ್ಗೆ ದೂರದೃಷ್ಟಿ ಇಟ್ಟುಕೊಂಡ ಯಜಮಾನನೇ ಈ ಆಯೋಗ. ಇದು ಶಿಕ್ಷಣ ಇಲಾಖೆಗೆ ಸೀಮಿತ ಆಗಬಾರದು, ಅದು ದೇಶದ ಆಸ್ತಿ ಆಗಬೇಕು. ಇಡೀ ದೇಶದ ಚುಕ್ಕಾಣಿ ಹಿಡಿದವರೇ ಇದರ ಮುಖ್ಯಸ್ಥರಾಗಬೇಕು. ಹಲವು ಇಲಾಖೆಗಳ ಸಹಯೋಗ ಇರಬೇಕು.  ರಾಜ್ಯದಲ್ಲೂ ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ಆಯೋಗ ರಚಿಸಬಹುದು ಎಂದು ಶಿಫಾರಸು ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆ ಗಳಿಗೆ ಸೂಕ್ತ ಸಂಪನ್ಮೂಲ ಬೇಕು. ಅದಕ್ಕಾಗಿಯೇ ಶಿಕ್ಷಣ ನೀತಿಯಲ್ಲಿ ಒಂದು ಅಧ್ಯಾಯ ಇದೆ. ಸಂಪನ್ಮೂಲ ಎಷ್ಟು ಕೊಡಬೇಕು ಎಂದರೆ ಈಗಿನ ಜಿಡಿಪಿ ಲೆಕ್ಕದಲ್ಲಿ ಅಲ್ಲ. ಬದಲಿಗೆ ವಾರ್ಷಿಕ ಖರ್ಚಿನಲ್ಲಿ ಎಷ್ಟು ಪ್ರತಿಶತ ಕೊಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಒಟ್ಟು ಖರ್ಚಿನ ಶೇ 20ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಕೊಡಬೇಕು. ಸದ್ಯ ಅಂದಾಜು ಶೇ 10ರಿಂದ 11ರಷ್ಟು ನೀಡಲಾಗುತ್ತಿದೆ. 

ಪ್ರತಿ ವರ್ಷ ಶೇ 1ರಷ್ಟು ಹೆಚ್ಚಳ ಮಾಡಿಕೊಂಡು ಹೋದರೆ 10 ವರ್ಷದಲ್ಲೇ ಈ ಗುರಿ ಸಾಧಿಸುವುದು ಸಾಧ್ಯವಿದೆ ಎಂದು ತಿಳಿಸಲಾಗಿದೆ.

ನಮ್ಮ ದೇಶದಲ್ಲಿ 170 ವರ್ಷಗಳಿಂದ ಬ್ರಿಟಿಷ್ ವಸಾಹತು ರೂಪದ ಶಿಕ್ಷಣ ವ್ಯವಸ್ಥೆ ನಡೆದು ಬರುತ್ತಿತ್ತು. ಭಾರತದ ದೇಶೀಯವಾದ ಹಾಗೂ ನೈಜ ವಿಚಾರದ ಆಧಾರದಲ್ಲಿ ನಮ್ಮ ಶಿಕ್ಷಣ ಕಟ್ಟಬೇಕು ಎಂಬ ನೆಲೆಯಲ್ಲಿ, ನಮ್ಮ ಸವಾಲುಗಳ ಆಧಾರದ ಮೇಲೆ, ಭಾರತದ ಆತ್ಮದ ಆಧಾರದಲ್ಲಿ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು. ಶಿಕ್ಷಣ ಬರೀ ಸರ್ಕಾರದ ನಿಲುವಿನ ಮೇಲೆ ರೂ‍ಪುಗೊಂಡ ವಿಚಾರವಾಗಿರಬಾರದು, ಅದು ಸಮಾಜ ಆಸಕ್ತಿಯ ಆಧಾರದಲ್ಲಿ ನಿರ್ಮಾಣವಾಗಬೇಕು ಎಂಬ ಆಶಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಇಟ್ಟುಕೊಂಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !