ಸರಿಸ್ಕಾ : ಮತ್ತೊಂದು ಹುಲಿ ಸಾವು

ಬುಧವಾರ, ಜೂನ್ 26, 2019
23 °C

ಸರಿಸ್ಕಾ : ಮತ್ತೊಂದು ಹುಲಿ ಸಾವು

Published:
Updated:

ಆಲ್ವಾರ್ (ಪಿಟಿಐ): ರಾಜಸ್ಥಾನದ ಆಲ್ವಾರ್‌ ಜಿಲ್ಲೆಯ ಸರಿಸ್ಕಾ ಹುಲಿರಕ್ಷಿತಾರಣ್ಯದಲ್ಲಿ ಹುಲಿಯೊಂದು ಸಾವಿಗೀಡಾಗಿದ್ದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ  ಹುಲಿಯ ಸಾವಿನ ಕಾರಣವನ್ನು ತಿಳಿಸಬಹುದು ಎಂದು ಹುಲಿರಕ್ಷಿತಾರಣ್ಯದ ವನ್ಯಜೀವಿ ಮುಖ್ಯ ಸಂರಕ್ಷಣಾಧಿಕಾರಿ ಅರಿಂದಮ್‌ ತೋಮರ್‌ ಹೇಳಿದ್ದಾರೆ. ಸುಮಾರು ಏಳು ಅಥವಾ ಎಂಟು ವರ್ಷಗಳ ಗಂಡು ಹುಲಿಯನ್ನು ಎರಡು ತಿಂಗಳ ಹಿಂದೆ ರಣಥಂಬೋರ್‌ ಹುಲಿರಕ್ಷಿತಾರಣ್ಯದಿಂದ ಸರಿಸ್ಕಾ ಅರಣ್ಯಕ್ಕೆ ಕರೆತರಲಾಗಿತ್ತು. ‘ಹುಲಿಗೆ ಗಾಯವಾಗಿದ್ದರಿಂದ ಶನಿವಾರ ಬೆಳಿಗ್ಗೆ ಅದಕ್ಕೆ ಅರಿವಳಿಕೆ ನೀಡಲಾಗಿತ್ತು. ಅದು ಸುಮಾರು ಎರಡು ಕಿಲೋಮೀಟರ್‌ನಷ್ಟು ದೂರ ನಡೆದು ಬಳಿಕ ಕುಸಿದು ಬಿತ್ತು. ತಜ್ಞರ ಸಮ್ಮುಖದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ತೋಮರ್‌ ಹೇಳಿದರು. 

ಸರಿಸ್ಕಾ ಹುಲಿರಕ್ಷಿತಾರಣ್ಯದಲ್ಲಿ ಈಗ ಮೂರು ಗಂಡು ಹುಲಿ ಮತ್ತು ಎಂಟು ಹೆಣ್ಣು ಹುಲಿ, ಐದು ಹುಲಿಮರಿಗಳಿವೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !