ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಹಣ ಸುಲಿಗೆ

ಶುಕ್ರವಾರ, ಜೂನ್ 21, 2019
24 °C

ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಹಣ ಸುಲಿಗೆ

Published:
Updated:

ನೊಯಿಡಾ: ಅತ್ಯಾಚಾರ ಆರೋಪ ಮಾಡುವುದಾಗಿ ಬೆದರಿಸಿ ಕಾರು ಚಾಲಕರಿಂದ ಹಣ ದೋಚುತ್ತಿದ್ದ ಆರೋಪದ ಮೇಲೆ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಮತ್ತು ಇಬ್ಬರು ಕಾನ್‌ಸ್ಟೆಬಲ್‌ ಸೇರಿದಂತೆ 15 ಮಂದಿಯನ್ನು ಮಂಗಳವಾರ ಬಂಧಿಸಲಾಗಿದೆ. 

ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಕೂಡ ಭಾಗಿಯಾಗಿದ್ದು, ಸೆಕ್ಟರ್‌ 44 ಪೊಲೀಸ್‌ ಔಟ್‌ಪೋಸ್ಟ್‌ ಬಳಿ  ಸೋಮವಾರ  ರಾತ್ರಿ ಕಾರುಚಾಲಕರೊಬ್ಬರನ್ನು ತಡೆದು ₹ 50 ಸಾವಿರ  ಹಣಕ್ಕಾಗಿ ಬೆದರಿಸಿ ವ್ಯವಹಾರ ಕುದುರಿಸುತ್ತಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ನೊಯಿಡಾದ ಸೆಕ್ಟರ್‌ 44 ಔಟ್‌ಪೋಸ್ಟ್‌ ಬಳಿ  ಕಾರುಚಾಲಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ತಂಡದ ಬಗ್ಗೆ  ಕೆಲವು ದಿನಗಳ ಹಿಂದೆ ಪೊಲೀಸರು ಎಚ್ಚರಿಕೆ ನೀಡಿದ್ದರು ಎಂದು ಗೌತಮ್‌ಬುದ್ಧ ನಗರದ ಹಿರಿಯ ಪೊಲೀಸ್‌ ಅಧೀಕ್ಷಕ ವೈಭವ್‌ ಕೃಷ್ಣ ಹೇಳಿದ್ದಾರೆ.

’ಆರೋಪಿ ತಂಡದ ಮಹಿಳೆ ಸೆಕ್ಟರ್‌ 44 ಔಟ್‌ಪೋಸ್ಟ್‌ ಬಳಿ ಹಾದು ಹೋಗುವ ಕಾರನ್ನು ನಿಲ್ಲಿಸಿ, ಬಳಿಕ ಪಕ್ಕದಲ್ಲೇ ಇರುವ  ಪೊಲೀಸ್‌ ನಿಯಂತ್ರಣ ಕೊಠಡಿ(ಪಿಸಿಆರ್‌)ಯ ವ್ಯಾನ್‌ ಸಂಪರ್ಕಿಸಿ ಕಾರು ಚಾಲಕ ಅತ್ಯಾಚಾರ ನಡೆಸಿದ್ದಾಗಿ ದೂರು ನೀಡಿದ ಬಳಿಕ ಔಟ್‌ಪೋಸ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು.  ಮಹಿಳೆಯ ಸಂಬಂಧಿಕರು ಎಂದು ಹೇಳಿಕೊಳ್ಳುವ ಕೆಲವರು ಅಲ್ಲಿಗೆ ಬರುವುದು, ಹಾಗೂ ಕಾರು ಚಾಲಕನ ಮೇಲೆ ಅತ್ಯಾಚಾರ ಕೇಸು ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುವ ತಂತ್ರವನ್ನು ಈ ತಂಡ ಮಾಡುತ್ತಿತ್ತು ಎಂದು ವೈಭವ್‌ ಕೃಷ್ಣ ಹೇಳಿದ್ದಾರೆ.

ಈ ತಂಡವನ್ನು ಪತ್ತೆ ಮಾಡಲೆಂದೇ ಸೋಮವಾರ ರಾತ್ರಿ ಪೊಲೀಸರು ಯೋಜನೆ ರೂಪಿಸಿದ್ದರು. ಸೆಕ್ಟರ್‌ 44 ಪೊಲೀಸ್  ಔಟ್‌ ಪೋಸ್ಟ್‌ ಮುಖ್ಯಸ್ಥ ಸುನೀಲ್‌ ಶರ್ಮಾ, ಕಾನ್‌ಸ್ಟೆಬಲ್‌ ಮನೋಜ್‌, ಅಜಯ್‌ವೀರ್‌, ದೇವೇಂದ್ರ ಮತ್ತು ಪಿಸಿಆರ್‌ ವಾಹನಗಳ ಮೂವರು ಚಾಲಕರು ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !