ಚುನಾವಣೆಗೆ ಅಡ್ಡಿಪಡಿಸಿದ ಎಎಪಿ ಶಾಸಕ ತಪ್ಪಿತಸ್ಥ

ಬುಧವಾರ, ಜೂನ್ 26, 2019
23 °C

ಚುನಾವಣೆಗೆ ಅಡ್ಡಿಪಡಿಸಿದ ಎಎಪಿ ಶಾಸಕ ತಪ್ಪಿತಸ್ಥ

Published:
Updated:

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪೂರ್ವ ದೆಹಲಿಯ ಕಲ್ಯಾಣ್‌ಪುರಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡಿದ ಪ್ರಕರಣದಲ್ಲಿ ಎಎಪಿ ಶಾಸಕ ಮನೋಜ್‌ ಕುಮಾರ್‌ ಅವರನ್ನು ದೆಹಲಿ ನ್ಯಾಯಾಲಯ ಅಪರಾಧಿ ಎಂದು ಹೇಳಿದೆ.

ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಅಡಚಣೆ ಮಾಡಿದ ಅಪರಾಧವು ಭಾರತೀಯ ದಂಡಸಂಹಿತೆ 186ರ ಪ್ರಕಾರ ಮತ್ತು ಮತಗಟ್ಟೆಯಲ್ಲಿ ವ್ಯವಸ್ಥೆ ಹಾಳು ಮಾಡಿದ ತಪ್ಪಿಗೆ ಜನಪ್ರತಿನಿಧಿ ಕಾಯ್ದೆಯ 131ನೇ ಸೆಕ್ಷನ್‌ ಪ್ರಕಾರ ಮನೋಜ್ ಕುಮಾರ್  ಅವರ ವಿರುದ್ಧ ಸರ್ಕಾರಿ ವಕೀಲರು ಮಂಡಿಸಿದ ವಾದ ಮತ್ತು ಸಾಕ್ಷಿಗಳು ವಿಶ್ವಾಸಾರ್ಹವಾಗಿದ್ದು ಅವರು ಅಪರಾಧಿ ಆಗಿದ್ದಾರೆ ಎಂದು ಹೆಚ್ಚುವರಿ ಪ್ರಧಾನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ತೀರ್ಪು ನೀಡಿದ್ದಾರೆ. 

ಇದೇ 25ರಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. 

ಎಎಪಿ ಅಭ್ಯರ್ಥಿಯಾಗಿದ್ದ ಕುಮಾರ್‌ ನೇತೃತ್ವದಲ್ಲಿ ಸುಮಾರು 50 ಮಂದಿ ಪ್ರತಿಭಟನಾಕಾರರು ಮತಗಟ್ಟೆ ಇದ್ದ ಶಾಲೆಯ ಮುಂಭಾಗದ ಗೇಟ್‌ನ ಬಳಿ ಪ್ರತಿಭಟನೆ ನಡೆಸಿದ್ದರು.  ಮತದಾನ ಮುಗಿದ ನಂತರ ಇವಿಎಂಗಳನ್ನು ಸಾಗಿಸಲು ಕೂಡ ಅವಕಾಶ ನೀಡದಂತೆ ಮನೋಜ್‌ ಕುಮಾರ್‌ ಪ್ರತಿಭಟನಾಕಾರರಿಗೆ ತಿಳಿಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !