ಎಲ್‌ಇಡಿ ಬೇಲ್ಸ್‌ ತೆಗೆಯಲು ಐಸಿಸಿ ನಕಾರ

ಗುರುವಾರ , ಜೂನ್ 27, 2019
29 °C

ಎಲ್‌ಇಡಿ ಬೇಲ್ಸ್‌ ತೆಗೆಯಲು ಐಸಿಸಿ ನಕಾರ

Published:
Updated:
Prajavani

ಲಂಡನ್: ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಸ್ಟಂಪ್‌ಗಳಿಗೆ ಬಳಕೆ ಮಾಡಲಾಗುತ್ತಿರುವ  ಎಲ್‌ಇಡಿ ‘ಝಿಂಗ್’ ಬೇಲ್ಸ್‌ ಗಳನ್ನು ಬದಲಿ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿರಾಕರಿಸಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಅವರು ಈ ಬೇಲ್ಸ್‌ಗಳನ್ನು ಬದಲಿಸಬೇಕು ಎಂದು ದೂರು ನೀಡಿದ್ದರು.

‘ಟೂರ್ನಿಯ ಮಧ್ಯದಲ್ಲಿ ಬೇಲ್‌ಗಳನ್ನು ಬದಲಿಸುವುದು ಸಾಧ್ಯವಿಲ್ಲ. ಎಲ್ಲ ಹತ್ತು ತಂಡಗಳಿಗೂ ಒಂದೇ ನಿಯಮ ಮತ್ತು ಒಂದೇ ರೀತಿಯ ಸಲಕರಣೆಗಳನ್ನು ನೀಡಲಾಗಿದೆ. 48 ಪಂದ್ಯಗಳಿಗೂ ಅದೇ ಅನ್ವಯಿಸುತ್ತದೆ’ ಎಂದು ಐಸಿಸಿಯ ಮೂಲಗಳು ಸ್ಕೈ ಸ್ಪೋರ್ಟ್ಸ್‌ ವಾಹಿನಿಗೆ ತಿಳಿಸಿವೆ.

ಈ ಟೂರ್ನಿಯಲ್ಲಿ ಸುಮಾರು ಹತ್ತು ಸಲ ಸ್ಟಂಪ್‌ಗಳಿಗೆ ಚೆಂಡು ಬಡಿದರೂ ಬೇಲ್ಸ್‌ನ ಲೈಟ್‌ಗಳು ಬೆಳಗಲೂ ಇಲ್ಲ ಮತ್ತು ಬೀಳಲೂ ಇಲ್ಲ. ಇದರಿಂದಾಗಿ ಬೌಲರ್‌ಗಳು ನಿರಾಶರಾದರು.

‘ಐಸಿಸಿಯ ಟೂರ್ನಿಗಳು ಮತ್ತು 2015ರ ವಿಶ್ವಕಪ್ ಟೂರ್ನಿಯಲ್ಲಿಯೂ  ಇದೇ ಸ್ಟಂಪ್‌ಗಳನ್ನು ಬಳಸಲಾಗಿತ್ತು. ಈವರೆಗೂ ಅವುಗಳನ್ನೇ ಬಳಕೆ ಮಾಡುತ್ತಿದ್ದೇವೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !