ಎಸಿಬಿ ದಾಳಿ: ಅಪಾರ ಆಸ್ತಿ ಪತ್ತೆ

ಬುಧವಾರ, ಜೂನ್ 26, 2019
23 °C

ಎಸಿಬಿ ದಾಳಿ: ಅಪಾರ ಆಸ್ತಿ ಪತ್ತೆ

Published:
Updated:

ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ಎಂಜಿನಿಯರ್‌ ಎಸ್‌.ಮಹದೇವಪ್ಪ ಅವರ ಮನೆಗಳು ಮತ್ತು ಕಚೇರಿ ಮೇಲೆ ಬುಧವಾರ ದಾಳಿಮಾಡಿ, ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು, ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.

ಮಹದೇವಪ್ಪ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಕ್ಷಿಣ ಕನ್ನಡ ಉಪ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್‌ ಹುದ್ದೆಯಲ್ಲಿದ್ದಾರೆ. ಇವರ ಕಚೇರಿ ಮತ್ತು ನಗರದ ಕದ್ರಿ ಕಂಬಳದಲ್ಲಿರುವ ಬಾಡಿಗೆ ಮನೆಗಳ ಮೇಲೆ ಎಸಿಬಿ ಪಶ್ಚಿಮ ವಲಯ ಎಸ್‌ಪಿ ಉಮಾ ಪ್ರಶಾಂತ್‌ ನೇತೃತ್ವದ ತಂಡ ದಾಳಿಮಾಡಿ, ಶೋಧ ನಡೆಸಿತು. ಆರೋಪಿ ಅಧಿಕಾರಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಚಿತ್ರದುರ್ಗದಲ್ಲೂ ಶೋಧ ನಡೆದಿದೆ.

ಅಧಿಕಾರಿಯು ಬೆಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಒಂದು ಡ್ಯೂಪ್ಲೆಕ್ಸ್‌ ಮನೆ, ಚಿತ್ರದುರ್ಗದಲ್ಲಿ ಒಂದು ಮನೆ, ಬೆಂಗಳೂರಿನಲ್ಲಿ ಎರಡು ಮತ್ತು ಚಿತ್ರದುರ್ಗದಲ್ಲಿ ಮೂರು ನಿವೇಶನಗಳನ್ನು ಹೊಂದಿದ್ದಾರೆ. ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟು 18 ಎಕರೆ ಕೃಷಿ ಜಮೀನು ಹೊಂದಿರುವ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

₹ 3.11 ಲಕ್ಷ ನಗದು, 2,150 ಅಮೆರಿಕನ್‌ ಡಾಲರ್‌, 4,800 ಹಾಂಕಾಂಗ್‌ ಡಾಲರ್‌, ಬ್ಯಾಂಕ್‌ ಖಾತೆಗಳಲ್ಲಿ ₹ 6.49 ಲಕ್ಷ ಠೇವಣಿ ಮತ್ತು ನಿಗದಿತ ಠೇವಣಿಯಲ್ಲಿ ₹ 12 ಲಕ್ಷ ತೊಡಗಿಸಿರುವುದು ಪತ್ತೆಯಾಗಿದೆ. 5.5 ಕೆ.ಜಿ. ಬೆಳ್ಳಿಯ ಆಭರಣ ಮತ್ತು ವಸ್ತುಗಳು ಮನೆಯಲ್ಲಿವೆ. ಜೀವ ವಿಮಾ ಪಾಲಿಸಿಗಳೂ ದೊರಕಿದ್ದು, ಪರಿಶೀಲನೆ ಮುಂದುವರಿದಿದೆ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !