ಶುಕ್ರವಾರ, 13–6–1969

ಬುಧವಾರ, ಜೂನ್ 26, 2019
24 °C

ಶುಕ್ರವಾರ, 13–6–1969

Published:
Updated:

ರಾಷ್ಟ್ರಪತಿ ಆಡಳಿತ ಬಂದ ನಂತರವೇ ಸಂಧಾನ ಸಾಧ್ಯ:

ತೆಲಂಗಾಣ ಬಗ್ಗೆ ಚೆನ್ನಾರೆಡ್ಡಿ ಸ್ಪಷ್ಟನೆ

ಹೈದರಾಬಾದ್, ಜೂನ್ 12– ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಘೋಷಿಸಿದ ನಂತರವೇ ತೆಲಂಗಾಣ ಬಗ್ಗೆ ಯಾವುದೇ ಹೊಸ ಸಂಧಾನ ಸಾಧ್ಯವೆಂದು ಪ್ರಜಾಸಮಿತಿ ಅಧ್ಯಕ್ಷರಾದ ಕೇಂದ್ರ ಸರ್ಕಾರದ ಮಾಜಿ ಸಚಿವ ಡಾ. ಚೆನ್ನಾರೆಡ್ಡಿ ತಿಳಿಸಿದ್ದಾರೆ. ರಾಷ್ಟ್ರಪತಿ ಆಡಳಿತ ಜಾರಿಗೆ ಬರದಿದ್ದರೆ ರಾಜ್ಯದಲ್ಲಿ ಮಾಮೂಲಿನ ಪರಿಸ್ಥಿತಿ ಮತ್ತೆ ಉಂಟಾಗುವುದು ಅಸಾಧ್ಯವೆಂದೂ ಅವರು ಇಂದು ಇಲ್ಲಿ ಹೇಳಿದರು.

ಪ್ರಧಾನಿಯೊಡನೆ ಬ್ರಹ್ಮಾನಂದರೆಡ್ಡಿ ಭೇಟಿ ಇಂದು

ನವದೆಹಲಿ, ಜೂನ್ 12– ಪ್ರಧಾನಿ ಇಂದಿರಾಗಾಂಧಿಯವರೊಡನೆ ತೆಲಂಗಾಣ ಪರಿಸ್ಥಿತಿ ಕುರಿತು ಸಮಾಲೋಚನೆ ಮುಂದುವರಿಸಲು ಆಂಧ್ರದ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದರೆಡ್ಡಿ ಅವರು ನಾಳೆ ಇಲ್ಲಿಗೆ ಆಗಮಿಸುತ್ತಾರೆ. ಶ್ರೀ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಚವಾಣ್ ಅವರೊಡನೆಯೂ ಮಾತುಕತೆ ನಡೆಸುವರು. ಆಂಧ್ರವನ್ನು ವಿಭಜಿಸದೆ ತೆಲಂಗಾಣ ಹಿತರಕ್ಷಣೆಗಾಗಿ ಯುಕ್ತ ರಾಜಕೀಯ ಆಡಳಿತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿನ್ನೆ ಕೇಂದ್ರ ಸಂಪುಟದ ಅನೌಪಚಾರಿಕ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಂಬಂಧದಲ್ಲಿ ಶ್ರೀರೆಡ್ಡಿಯವರೊಡನೆ ಸಮಾಲೋಚಿಸಲಾಗುವುದು.

ಎಚ್.ಎಂ.ಟಿ.ಗೆ 3 ವರ್ಷಗಳಲ್ಲಿ 5 ಕೋಟಿ ರೂ. ರಫ್ತು ಸಾಮರ್ಥ್ಯ

ಬೆಂಗಳೂರು, ಜೂನ್ 12– ಮುಂದಿನ 3 ವರ್ಷಗಳಲ್ಲಿ ಐದು ಮಿಲಿಯನ್ ಡಾಲರುಗಳ (ಸುಮಾರು 4 ಕೋಟಿ ರೂ.) ಯಂತ್ರಗಳನ್ನು ರಫ್ತು ಮಾಡುವ ಖಾತರಿಗಳನ್ನು ಎಚ್.ಎಂ.ಟಿ.ಯ ಅಧ್ಯಕ್ಷ ಶ್ರೀ ಎಸ್.ಎಂ. ಪಾಟೀಲ್ ಅವರು ತಮ್ಮ 37 ದಿನಗಳ ಪ್ರವಾಸದಲ್ಲಿ ಪಡೆದು ಹಿಂದಿರುಗಿದ್ದಾರೆ. ಪ್ರವಾಸ ಕಾಲದಲ್ಲಿ ಎಚ್.ಎಂ.ಟಿ.ಯಲ್ಲಿ ಹೊಸ ಯಂತ್ರಗಳ ತಯಾರಿಕೆ ಬಗ್ಗೆ ಒಪ್ಪಂದಗಳನ್ನು ಕುರಿತು ಸಂಧಾನ ನಡೆಸಿದ್ದಾರೆ. 1 ಕೋಟಿ ರೂಪಾಯಿ ಬೆಲೆಯಷ್ಟು ಯಂತ್ರಗಳನ್ನು ರಫ್ತು ಮಾಡುವುದು ಉಳಿದಿದೆ. ಇದೂ ಸೇರಿದರೆ ಮುಂದಿನ 3 ವರ್ಷಗಳಲ್ಲಿ ಎಚ್.ಎಂ.ಟಿ. ಒಟ್ಟು 5 ಕೋಟಿ ರೂಪಾಯಿ ಬೆಲೆಯಷ್ಟು ಯಂತ್ರಗಳನ್ನು ರಫ್ತು ಮಾಡುವುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !