ಕಡ್ಡಾಯ ಮಾಡಿದ್ದರಿಂದ ಅಡ್ಡದಾರಿ ಪ್ರವೃತ್ತಿ ಹೆಚ್ಚಿತು

ಮಂಗಳವಾರ, ಜೂನ್ 18, 2019
29 °C

ಕಡ್ಡಾಯ ಮಾಡಿದ್ದರಿಂದ ಅಡ್ಡದಾರಿ ಪ್ರವೃತ್ತಿ ಹೆಚ್ಚಿತು

Published:
Updated:

ಡಾ. ಎನ್.ಎಸ್. ಗುಂಡೂರ ಅವರ ‘ಪಿಎಚ್‌.ಡಿ ಎಂಬ ಬಿಕ್ಕಟ್ಟು’ ಲೇಖನ ಸಮಯೋಚಿತ. ಪಿಎಚ್‌.ಡಿ ಪ್ರಬಂಧಗಳ ಕುರಿತು ಇರುವ ಆರೋಪಗಳು ಕಟು ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಸಂಶೋಧನೆಯನ್ನು ಉಪನ್ಯಾಸ ಹುದ್ದೆಗೆ ಕಡ್ಡಾಯ ಮಾಡಿರುವುದೇ ಸರಿಯಾದ ಕ್ರಮವಲ್ಲ. ಸಂಶೋಧನೆಗೆ ಅಗತ್ಯವಿರುವ ವಿಸ್ತಾರವಾದ ಓದು, ಗ್ರಹಿಕೆ, ಕೌಶಲಗಳು ಸಾಧ್ಯವಾಗುವುದು ಕೆಲವು ವರ್ಷಗಳ ಬೋಧನೆಯ ಆನಂತರ. ಪಿಎಚ್‌.ಡಿ ಪ್ರಬಂಧಕ್ಕೂ ಬೋಧನೆಯ ಕೌಶಲಗಳಿಗೂ ಸಂಬಂಧ ಇರಬೇಕಾಗಿಲ್ಲ.

ಎಲ್ಲರೂ ಪಿಎಚ್‌.ಡಿ ಪದವಿ ಪಡೆಯಬೇಕು ಎಂದು ಕಡ್ಡಾಯ ಮಾಡಿದ್ದರಿಂದ ಅಡ್ಡದಾರಿ ಹಿಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಸಾಮೂಹಿಕವಾಗಿ ಪಿಎಚ್.ಡಿ ಪದವಿ ನಿರೀಕ್ಷಿಸುವುದು ಸಮಂಜಸವಲ್ಲ. ಉಪನ್ಯಾಸಕ ಹುದ್ದೆಯನ್ನು ಪ್ರೀತಿಸುವ, ಬದ್ಧತೆಯಿಂದ ಕೆಲಸ ಮಾಡುವ ಮತ್ತು ಜ್ಞಾನದಾಹ ಇರುವ ಶಿಕ್ಷಕರು ನಮ್ಮ ಇಂದಿನ ತುರ್ತು ಅಗತ್ಯವೇ ವಿನಾ ಡೋಂಗಿ ಸಂಶೋಧಕರಲ್ಲ. ಈ ವಿಷಯವನ್ನು ಮನಗಂಡರೆ ಪಿಎಚ್‌.ಡಿ ಬಿಕ್ಕಟ್ಟಿನಿಂದ ಹೊರಬರಬಹುದು.
-ಪ್ರೊ. ಡಿ.ಎಸ್. ಮಂಜುನಾಥ, ಶಿವಮೊಗ್ಗ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !