ಇಲ್ಲಿ ಹೀಗೆ.. ಅಲ್ಲಿ ಹಾಗೆ!

ಶುಕ್ರವಾರ, ಜೂನ್ 21, 2019
23 °C

ಇಲ್ಲಿ ಹೀಗೆ.. ಅಲ್ಲಿ ಹಾಗೆ!

Published:
Updated:

‘ನಿಮ್‌ ಕಡೆ ಸಾಂಬರಂದ್ರೆ ನಮ್‌ ಕಡಿ ತಿಳಿಯೂದಿಲ್ಲ, ನಮ್‌ ಕಡೆ ಡಾಮರಂದ್ರೆ ನಿಮ್‌ ಕಡಿ ತಿಳಿಯೂದಿಲ್ಲ’ ಎಂದು ಗುನುಗುತ್ತಾ ಬಂದ ಮುದ್ದಣ್ಣ. ಹಾಡನ್ನು ಕೇಳುತ್ತಿದ್ದ ವಿಜಿಗೆ ಸಾಹಿತ್ಯ ಬದಲಾದಂತೆನಿಸಿತು. ‘ನಿಮ್‌ ಕಡಿ ಅರೆಸ್ಟ್‌ ಆದ್ರ ಆಘಾತ ಅನ್ಕೊತೀರಿ, ನಮ್‌ ಕಡಿ ಅರೆಸ್ಟ್‌ ಆದ್ರ ಅನುಕೂಲಾತು ಅಂತೀವಿ’ ಎಂದು ಮುಂದುವರಿಸಿದ ಮುದ್ದಣ್ಣ. 

‘ಏನಣ್ಣ, ಏನೇನೋ ಹಾಡ್ತಿದೀಯಾ’ ಕುತೂಹಲದಿಂದ ಕೇಳ್ದ ವಿಜಿ. ‘ಇಲ್ಲಿ ಯಾರೋ ರಿಪೋರ್ಟರ‍್ರು ಅರೆಸ್ಟ್‌ ಆದ್ರೆ ಕೂಗಾಡೋರು, ಅಲ್ಲಿ ಉತ್ತರ ಪ್ರದೇಶದಾಗ ಜರ್ನಲಿಸ್ಟ್‌ಗಳನ್ನ ಬಂಧಿಸಿದ್ರೆ ಸೈಲೆಂಟ್‌ ಆಗ್ಯಾರಲ್ಲ, ಅದನ್ನ ಕಂಡು ಹೀಗೆ ಹಾಡಿದೆ’ ನಕ್ಕ ಮುದ್ದಣ್ಣ. 

‘ಇದನ್ನೆಲ್ಲ ಅಬ್ಸರ್ವ್‌ ಮಾಡೋದನ್ನ ಕಲಿತುಬಿಟ್ಟಿದ್ದೀಯಾ’ ಎಂದು ಬೆನ್ನು ತಟ್ಟಿದ ವಿಜಿ. ‘ಇಂಟರ್‌ನ್ಯಾಷನಲ್‌ ಮ್ಯಾಟರ್ರೂ ನಂಗೊತ್ತು. ರಾಜಕೀಯ ವ್ಯಂಗ್ಯಚಿತ್ರ ಬರೆಯೋರ ವಿರುದ್ಧ ಕೇಸ್‌ ಹಾಕಿದ್ದನ್ನ ವಿರೋಧಿಸಿ, ನ್ಯೂಯಾರ್ಕ್‌ ಟೈಮ್ಸ್‌ ಪೊಲಿಟಿಕಲ್‌ ಕಾರ್ಟೂನು ಪಬ್ಲಿಷ್‌ ಮಾಡೋದನ್ನೇ ನಿಲ್ಸಿಬಿಟ್ಟಿದೆಯಂತೆ...’ ಎಂದ ಮುದ್ದಣ್ಣ ವಿಶ್ವಮಟ್ಟದ ವಿಶ್ಲೇಷಕನಂತೆ ಪೋಸು ಕೊಟ್ಟ. 

‘ಲೋಕಲ್‌ ವಿಷ್ಯದ ಬಗ್ಗೆಯೂ ಸ್ವಲ್ಪ ಮಾತಾಡು ಪ್ಲೀಸ್‌...’

‘ಏನ್‌ ಬಿಡಿ ಸಾರ್, ಇಲ್ಲೆಲ್ಲ ವಿರೋಧಾಭಾಸ. ಜಾತ್ಯತೀತ ಪಕ್ಷದವರು ಅಂತಾರೆ, ಪರ್ಜನ್ಯ ಹೋಮ ಮಾಡಿಸ್ತಾರೆ. ತಿರುಪತಿ–ಗಿರುಪತಿ ಅಂತಾ ಮಾತಾಡ್ತಾರೆ.  ರಾಗ–ದ್ವೇಷ, ಜಾತಿ–ಮತ ಪಂಥವೆಣಿಸದೆ ಕೆಲಸ ಮಾಡ್ತೀವಿ ಅಂತಾ ಪ್ರಮಾಣ ಮಾಡಿರ್ತಾರೆ... ನೀವೇನ್‌ ನಮಗೆ ವೋಟು ಹಾಕಿದಿರಾ, ನಿಮ್‌ ಕೆಲ್ಸ ಯಾಕ್‌ ಮಾಡಿಕೊಡಬೇಕು ಅಂತಾ ಕೇಳ್ತಾರೆ’ ಬೇಸರಿಸಿದ ಮುದ್ದಣ್ಣ.

‘ಅದ್ಸರಿ ಎಲ್ಲಿ ಹೊರಟೆ?’

‘ಬಿಪಿಎಲ್‌ ಕಾರ್ಡ್‌ಗೆ ಅಪ್ಲೈ ಮಾಡೋಕೆ ಹೋಗ್ತಿದೀನಿ’.

‘60 ಲಕ್ಷ ರೂಪಾಯಿ ಆಸ್ತಿ ಒಡೆಯನಿಗೆ ಬಿಪಿಎಲ್‌ ಕಾರ್ಡಾ?’

ಆಶ್ಚರ್ಯದಿಂದ ಬಾಯಿ ತೆರೆದ ವಿಜಿ ಕಂಡು ನಗುತ್ತಾ ಮುಂದೆ ಹೋದ ಮುದ್ದಣ್ಣ!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !