ಚುಟುಕು ಸುದ್ದಿ

ಬುಧವಾರ, ಜೂನ್ 26, 2019
23 °C

ಚುಟುಕು ಸುದ್ದಿ

Published:
Updated:

ಅರ್ಜಿ ಆಹ್ವಾನ 

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ 2 ವರ್ಷಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. 40 ವರ್ಷ ಮೀರಿರದ ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಎರಡು ವರ್ಷದ ಒಳಗೆ ಕಾನೂನು ಪದವಿ ಪಡೆದಿರಬೇಕು. 

ತರಬೇತಿ ವೇಳೆ ತಿಂಗಳಿಗೆ ₹10 ಸಾವಿರ ಶಿಷ್ಯ ವೇತನ ನೀಡಲಾಗುವುದು. ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ ಮೀರಿರಬಾರದು. ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಖುದ್ದಾಗಿ ಅರ್ಜಿ ಸಲ್ಲಿಸಬಹುದು. ದಾಖಲೆಗಳನ್ನು ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನ. ವಿಳಾಸ: ಜಂಟಿ ನಿರ್ದೇಶಕರ ಕಛೇರಿ, ಬೆಂಗಳೂರು ನಗರ ಜಿಲ್ಲೆ, 4ನೇ ಮುಖ್ಯರಸ್ತೆ, 16ನೇ ಅಡ್ಡರಸ್ತೆ,  ಸಂಪಂಗಿರಾಮನಗರ.

ವಿವರಗಳಿಗಾಗಿ: www.sw.kar.nic.in

ಉಚಿತ ತಪಾಸಣೆ

ಆದಿತ್ಯ ನೇತ್ರಾಲಯ ಆಸ್ಪತ್ರೆ ವತಿಯಿಂದ ಇದೇ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಸ್ಥಳ–ಆದಿತ್ಯ ನೇತ್ರಾಲಯ, ನಂ.244, 7ನೇ ಕ್ರಾಸ್‌, ಕಾಮಾಕ್ಯ ಚಿತ್ರಮಂದಿರದ ಎದುರು, ಬನಶಂಕರಿ 3ನೇ ಹಂತ. ವಿವರಗಳಿಗಾಗಿ: 9110482445

ವೈದಿಕ ತರಬೇತಿ

ಮಾಗಡಿ ಕರಣಿಕರ ವೈದಿಕ ಧರ್ಮ ಪಾಠಶಾಲೆಯಲ್ಲಿ ವೈದಿಕ ವಿದ್ಯೆ ತರಬೇತಿಗೆ 10ರಿಂದ 14ವರ್ಷದೊಳಗಿನ ಬ್ರಾಹ್ಮಣ ವಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೇದಾಧ್ಯಯನ, ಸಂಸ್ಕೃತ, ಧರ್ಮಶಾಸ್ತ್ರ, ಜೋತಿಷ್ಯ ಕಲಿಸಲಾಗುವುದು. ಆಸಕ್ತರು ಅರ್ಜಿಯ ಜೊತೆಗೆ ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಜಾತಕದ ನಕಲು ಹಾಗೂ ಸ್ವವಿವರಗಳನ್ನು ವಾರದೊಳಗೆ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ವಿಳಾಸ: ಗೌರವ ಕಾರ್ಯದರ್ಶಿಗಳು, ಮಾಗಡಿ ಕರಣಿಕರ ವೈದಿಕ ಧರ್ಮ ಪಾಠಶಾಲೆ, ವಾಣಿವಿಲಾಸ ರಸ್ತೆ, ಬಸವನಗುಡಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !