ದುಬೈನಿಂದಲೂ ಹೂಡಿಕೆ

ಬುಧವಾರ, ಜೂನ್ 26, 2019
23 °C
ದೂರು ನೀಡುವ ಬದಲು ವಕಾಲತ್ತು ವಹಿಸಿದ್ದ ಹೂಡಿಕೆದಾರರು

ದುಬೈನಿಂದಲೂ ಹೂಡಿಕೆ

Published:
Updated:

ಬೆಂಗಳೂರು: ‘ಐಎಂಎ’ ಕಂಪನಿಗೆ ದುಬೈನಿಂದಲೂ ಜನ ಹಣ ಹೂಡಿಕೆ ಮಾಡಿದ್ದಾರೆ. ಆ ಬಗ್ಗೆ ಕಂದಾಯ ಇಲಾಖೆ ಉಪವಿಭಾಗಾಧಿಕಾ
ರಿಗೆ ದುಬೈನಿಂದ ಕರೆ ಬಂದಿದ್ದವು.

ಅಂಬಿಡೆಂಟ್‌ ವಂಚನೆ ಪ್ರಕರಣ ಬಯಲಾದಾಗ ಇದೇ ರೀತಿ ಜನರಿಂದ ಹೂಡಿಕೆ ಇದ್ದ ಕಂಪನಿಗಳ ಕಾರ್ಯವೈಖರಿ ಬಗ್ಗೆ ನಿಗಾ ವಹಿಸಲು ರಾಜ್ಯಕ್ಕೆ ಆರ್‌ಬಿಐ ಪತ್ರ ಬರೆದಿತ್ತು. 

ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ನೇತೃತ್ವದಲ್ಲಿ ದೂರು ಪ್ರಾಧಿಕಾರವನ್ನು ರಚನೆಯಾಗಿತ್ತು. ಜನ ಎಷ್ಟು ಹೂಡಿಕೆ ಮಾಡಿದ್ದಾರೆ? ಆ ಕಂಪನಿಗಳ ಆಸ್ತಿ ಮೌಲ್ಯ ಎಷ್ಟಿದೆ? ಎಂಬುದನ್ನು ಪತ್ತೆ ಹಚ್ಚುವ ಕೆಲಸಪ್ರಾಧಿಕಾರ ಆರಂಭಿಸಿತ್ತು. ದೂರು
ಕೊಡಿ ಎಂದು ಹೂಡಿಕೆ ಮಾಡಿದವರಿಗೆ ವಾರ್ತಾ ಇಲಾಖೆ ಮೂಲಕ ಕನ್ನಡ, ಇಂಗ್ಲಿಷ್ ಪತ್ರಿಕೆಗಳಿಗೆ ಪ್ರಕಟಣೆ ಕೊಡಲಾಯಿತು. ಆದರೆ ಉರ್ದು ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ.

ದುಬೈನಿಂದ ಕರೆ ಮಾಡಿ ‘ಐಎಂಎ ಕಂಪನಿಯಲ್ಲಿ ನಾವೂ ಹಣ ಹೂಡಿದ್ದೇವೆ. ಪ್ರತಿ ತಿಂಗಳು ಖಾತೆಗೆ ಹಣ ಜಮೆ ಆಗುತ್ತಿದೆ. ಸುಮ್ಮನೆ ಏಕೆ ತೊಂದರೆ ಕೊಡುತ್ತಿದ್ದೀರಿ’ ಎಂದಿದ್ದರು. ‘ದೂರು ಬಾರದ ಕಾರಣ ಆಗ ತನಿಖೆ ಮುಂದುವರಿಯಲಿಲ್ಲ. ತನಿಖೆ ನಡೆಸಲು ನಮಗೆ ಈಗ ಅಧಿಕಾರ ಇಲ್ಲ’ ಎಂದು ನಾಗರಾಜ್ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !