‘ವಿಕೆಓ’ ಶಾಲೆಗೆ ರಜೆ: 940 ಮಕ್ಕಳು ಅತಂತ್ರ

ಬುಧವಾರ, ಜೂನ್ 26, 2019
23 °C
ದತ್ತು ಪಡೆದಿದ್ದ ಶಿವಾಜಿನಗರದ ಶಾಲೆಗೆ ರಜೆ

‘ವಿಕೆಓ’ ಶಾಲೆಗೆ ರಜೆ: 940 ಮಕ್ಕಳು ಅತಂತ್ರ

Published:
Updated:

ಬೆಂಗಳೂರು: ನಗರದ ಐಎಂಎ ಸಂಸ್ಥೆಯಿಂದ ಸಾವಿರಾರು ಮಂದಿಗೆ ವಂಚನೆ ಆಗಿರುವ ಪ್ರಕರಣದಿಂದ ನೂರಾರು ಮಕ್ಕಳು ಸಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಶಿವಾಜಿನಗರದಲ್ಲಿರುವ ಸರ್ಕಾರದ ‘ವಿಕೆಓ’ ಶಾಲೆಯನ್ನು ಐಎಂಎ ಸಮೂಹ ಸಂಸ್ಥೆಯೇ ದತ್ತು ಪಡೆದಿತ್ತು. ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದ ಶಿಕ್ಷಕರಿಗೆ ಕಂಪನಿಯೇ ವೇತನ ನೀಡುತ್ತಿತ್ತು. ಈಗ ಆ ಶಾಲೆಗೆ ತಾತ್ಕಾಲಿಕವಾಗಿ ರಜೆ ನೀಡಲಾಗಿದೆ. 

ಈ ಶಾಲೆಯಲ್ಲಿ 940 ಮಕ್ಕಳು ಓದುತ್ತಿದ್ದಾರೆ. ಮೂವರು ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿದ್ದಾರೆ. ಉಳಿದಂತೆ 70 ಸಿಬ್ಬಂದಿಯನ್ನು ಐಎಂಎ ಸಂಸ್ಥೆಯೇ ಗುತ್ತಿಗೆ ಆಧಾರದಲ್ಲಿ ನೇಮಿಸಿದ್ದು, ವೇತನವನ್ನೂ ನೀಡುತ್ತಿತ್ತು. ಈಗ ಕಂಪನಿಯೇ ಬಂದ್ ಆಗಿದ್ದು, ಇನ್ನು
ಮುಂದೆ ನಮಗೆ ವೇತನ ನೀಡುವವರು ಯಾರು ಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ. ಅದೇ ಕಾರಣಕ್ಕೆ ಅವರು ಶಾಲೆಗೂ ಬಂದಿಲ್ಲ. 

‘ಸರ್ಕಾರದ ಜಾಗದಲ್ಲಿರುವ ಶಾಲೆ ಇದಾಗಿದ್ದು, ನಿರ್ವಹಣೆ ಜವಾಬ್ದಾರಿಯನ್ನು ಮಾತ್ರ ಐಎಂಎ ಸಂಸ್ಥೆ ವಹಿಸಿಕೊಂಡಿತ್ತು. ಮುಂದಿನ ತಿಂಗಳಿನಿಂದ ವೇತನ ಸಿಗುವುದಿಲ್ಲವೆಂದು ಭಯಗೊಂಡಿರುವ ಗುತ್ತಿಗೆ ಆಧಾರದ ಶಿಕ್ಷಕರು, ತರಗತಿಯನ್ನೇ ತೆಗೆದುಕೊಳ್ಳು
ತ್ತಿಲ್ಲ. ಇತರೆ ಸಿಬ್ಬಂದಿ, ಸೋಮವಾರದಿಂದ ಶಾಲೆಗೆ ಬಂದಿಲ್ಲ. ಹೀಗಾಗಿ, ರಜೆ ನೀಡಲಾಗಿದೆ’ ಎಂದು ಶಾಲಾ ಶಿಕ್ಷಕರು ಹೇಳಿದರು. ಬುಧವಾರ ಹಲವಾರು ಪೋಷಕರು ಶಾಲೆಗೆ ಬಂದಿದ್ದರು. ಮಕ್ಕಳ ಭವಿಷ್ಯದ ಕುರಿತಂತೆ ಬಹಳ ಚಿಂತಿತರಾಗಿದ್ದುದು ಕಂಡುಬಂತು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !