‘ಅತಿಥಿ ಶಾಸಕರಾಗಬೇಡಿ, ಅಳಲು ಆಲಿಸಿ’| ಸಿದ್ದರಾಮಯ್ಯಗೆ ಟ್ವಿಟರ್‌ನಲ್ಲಿ ಮನವಿ

ಬುಧವಾರ, ಜೂನ್ 26, 2019
25 °C

‘ಅತಿಥಿ ಶಾಸಕರಾಗಬೇಡಿ, ಅಳಲು ಆಲಿಸಿ’| ಸಿದ್ದರಾಮಯ್ಯಗೆ ಟ್ವಿಟರ್‌ನಲ್ಲಿ ಮನವಿ

Published:
Updated:

ಬಾಗಲಕೋಟೆ: ದಯವಿಟ್ಟು ಅತಿಥಿ ಶಾಸಕರಾಗಬೇಡಿ. ಇಲ್ಲಿಯೇ 15 ದಿನ ವಾಸ್ತವ್ಯವಿದ್ದು, ಕ್ಷೇತ್ರದ ಜನರ ಬವಣೆ ಆಲಿಸಿ..

ಇದು ಬಾದಾಮಿಯ ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಅವರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ಮಾಡಿರುವ ಮನವಿ.

‘ಬಾದಾಮಿಗೆ ಯಾವಾಗ ಭೇಟಿ ನೀಡುತ್ತೀರಿ ಎಂದು ಕ್ಷೇತ್ರದ ಜನರು ಕಾಯುತ್ತಿದ್ದಾರೆ. ಬರ ಪರಿಸ್ಥಿತಿಯ ವೀಕ್ಷಣೆ ಮಾಡಿಲ್ಲ. ದನಕರುಗಳಿಗೆ ನೀರು–ಮೇವು ಇಲ್ಲ, ಜನತಾದರ್ಶನ ಇಲ್ಲ. ಅಧಿಕಾರಿಗಳು ಮಾತು ಕೇಳುತ್ತಿಲ್ಲ. ನೀವು 15 ದಿನವಾದರೂ ಬಾದಾಮಿಯಲ್ಲಿ ಇರಿ ಸಾಹೇಬರೇ, ನೀವಿದ್ದರೆ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಇಷ್ಟಲಿಂಗ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಪ್ರಚಾರಕ್ಕೆಂದು ಬಾದಾಮಿಗೆ ಬಂದಿದ್ದ ಸಿದ್ದರಾಮಯ್ಯ, ನಂತರ ಕ್ಷೇತ್ರಕ್ಕೆ ಬಂದಿಲ್ಲ. ಜೂನ್ 7ರಂದು ಬರ ಪರಿಸ್ಥಿತಿ ಅಧ್ಯಯನಕ್ಕೆಂದು ಬಾದಾಮಿಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಅಧಿಕಾರಿಗಳ ಸಭೆ ನಡೆಸಿದ್ದರು. ಈ ವೇಳೆ ನಿಮ್ಮ ಶಾಸಕರು (ಸಿದ್ದರಾಮಯ್ಯ) ಬಂದಿದ್ದರಾ? ಎಂದು ಸಭೆಯಲ್ಲಿದ್ದವರನ್ನು ಪ್ರಶ್ನಿಸಿದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !