ಕನಗನಮರಡಿ ಬಸ್‌ ದುರಂತ| ಕೇಂದ್ರದ ಪರಿಹಾರ: ಸುಮಲತಾ–ಸಿ.ಎಂ ಬೆಂಬಲಿಗರ ಕೆಸರೆರಚಾಟ

ಸೋಮವಾರ, ಜೂನ್ 17, 2019
23 °C

ಕನಗನಮರಡಿ ಬಸ್‌ ದುರಂತ| ಕೇಂದ್ರದ ಪರಿಹಾರ: ಸುಮಲತಾ–ಸಿ.ಎಂ ಬೆಂಬಲಿಗರ ಕೆಸರೆರಚಾಟ

Published:
Updated:

ಮಂಡ್ಯ: ಕನಗನಮರಡಿ ಬಸ್‌ ದುರಂತದಲ್ಲಿ ಮೃತಪಟ್ಟ 30 ಮಂದಿಯ ಕುಟುಂಬ ಸದಸ್ಯರಿಗೆ ಕೇಂದ್ರ ಸರ್ಕಾರ ತಲಾ ₹2 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ಪರಿಹಾರದ ಲಾಭ ಪಡೆಯುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಎ.ಸುಮಲತಾ ಬೆಂಬಲಿಗರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಕಟಿಸಿರುವ ಬೆಂಬಲಿಗರು ತಮ್ಮ ನಾಯಕ–ನಾಯಕಿಯಿಂದಲೇ ಪರಿಹಾರ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶೇಷ ಆಸಕ್ತಿ ವಹಿಸಿ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಪ್ರಧಾನಿ ಪರಿಹಾರ ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬೆಂಬಲಿಗರು ಸಂದೇಶ ಪ್ರಕಟಿಸಿದ್ದಾರೆ.

ಸುಮಲತಾ ಅವರ ಪ್ರಯತ್ನದಿಂದಾಗಿ ಪರಿಹಾರ ಸಿಕ್ಕಿದೆ. ಸಂಸದೆಯಾದ ಕೆಲವೇ ದಿನಗಳಲ್ಲಿ ಪರಿಹಾರ ತಂದಿದ್ದಾರೆ. ಸಂಸದರಿಗೆ ಬಿಜೆಪಿ ಬೆಂಬಲ ಇರುವ ಕಾರಣ ಪ್ರಧಾನಿಯು ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ ಎಂದು ಸುಮಲತಾ ಬೆಂಬಲಿಗರು ಪೋಸ್ಟ್‌ ಹಾಕಿದ್ದಾರೆ.‌

ಕೆಲವರು ಎರಡೂ ಕಡೆಯ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ, ಸಂಸದೆ ಇಬ್ಬರೂ ಪರಿಹಾರ ಕೊಡಿಸಿಲ್ಲ. ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ ಎಂದು ಸಂದೇಶ ಹಾಕಿದ್ದಾರೆ.

ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಸುಮಲತಾ, ‘ದುರ್ಘಟನೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ದುರಂತದ ವಿಚಾರ. ಯಾರು ಕೊಟ್ಟಿದ್ದಾರೆ, ಯಾರು ಕೊಡಿಸಿದ್ದಾರೆ ಎಂಬುದು ಮುಖ್ಯವಲ್ಲ. ಮೃತರ ಸಂಬಂಧಿಗಳಿಗೆ ಪರಿಹಾರ ಸಿಕ್ಕಿರುವುದಷ್ಟೇ ಮುಖ್ಯ. ನಾನು ಕೊಟ್ಟಿದ್ದೇನೆ, ನೀವು ಕೊಟ್ಟಿಲ್ಲ ಎಂದರೆ ತಪ್ಪಾಗುತ್ತದೆ. ನಾನು ಆ ತಪ್ಪು ಮಾಡುವುದಿಲ್ಲ. ಸಾಧನೆಗಳು ಮಾತನಾಡಬೇಕು, ನಾವೇ ಸಾಧನೆಗಳ ಬಗ್ಗೆ ಮಾತನಾಡಬಾರದು’ ಎಂದರು.

ಕೇಂದ್ರ ಸರ್ಕಾರದಿಂದ ₹60 ಲಕ್ಷ ಬಂದಿದ್ದು, ಮೃತರ ಸಂಬಂಧಿಕರಿಗೆ ತಹಶೀಲ್ದಾರ್‌ ತಲಾ ₹2 ಲಕ್ಷ ಪರಿಹಾರ ವಿತರಣೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 13

  Happy
 • 4

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !