ಶನಿವಾರ, 14–6–1969

ಮಂಗಳವಾರ, ಜೂನ್ 25, 2019
30 °C
ಶನಿವಾರ,

ಶನಿವಾರ, 14–6–1969

Published:
Updated:

ತಿರುಪತಿ ದೇವಾಲಯಕ್ಕೆ ಗಜ ಸಮರ್ಪಣೆ

ಬೆಂಗಳೂರು, ಜೂನ್ 13– ‘ಪದ್ಮಾವತಿ’ ಎಂಬ ಹೆಸರಿನ ಆನೆಯನ್ನು ರಾಜ್ಯದ ಅರಣ್ಯ ಸಚಿವ ಶ್ರೀ ಆಲೂರು ಹನುಮಂತಪ್ಪ ಅವರು ಇಂದು ಇಲ್ಲಿ ತಿರುಪತಿ ತಿರುಮಲೈ ದೇವಸ್ಥಾನಕ್ಕೆ ಅರ್ಪಿಸಿದರು.

ತಿರುಪತಿ ತಿರುಮಲೈ ದೇವಸ್ಥಾನ ಮಂಡಳಿಯ ಸದಸ್ಯರುಗಳಾದ ಎ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ಸಿ. ಬಾಲಿರೆಡ್ಡಿ ಮತ್ತು ಶ್ರೀ ಕೊಂಡಾರೆಡ್ಡಿ ಅವರು ಅದನ್ನು ದೇವಸ್ಥಾನದ ಪರವಾಗಿ ಸ್ವೀಕರಿಸಿದರು.

ಎಂಜಿನಿಯರಿಂಗ್, ವಿದ್ಯುತ್ ಉಪಕರಣ ರಫ್ತಿಗೆ ಭಾರತ–ರಷ್ಯ ಸಂಯುಕ್ತ ಸಮಿತಿ

ನವದೆಹಲಿ, ಜೂನ್ 13– ಭಾರತದಲ್ಲಿ ರಷ್ಯದ ನೆರವಿನಿಂದ ಸರ್ಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಉದ್ಯಮಗಳ ಉತ್ಪಾದನೆಗಳಿಗೆ ರಫ್ತು ಮಾರುಕಟ್ಟೆಯನ್ನು ಹುಡುಕಲು ಭಾರತ–ರಷ್ಯ ಸಂಯುಕ್ತ ಸಮಿತಿಯೊಂದನ್ನು ಸದ್ಯದಲ್ಲಿಯೇ ರಚಿಸಲಾಗುವುದು.

ಪಾಲಿಟೆಕ್ನಿಕ್‌ಗಳಲ್ಲಿ ವಿದ್ಯಾರ್ಥಿ ಕೊರತೆ: ಅಧ್ಯಯನ ವಿಷಯಗಳಲ್ಲಿ ಮಾರ್ಪಾಟು

ಬೆಂಗಳೂರು, ಜೂನ್ 13– ಎಂಜಿನಿಯರಿಂಗ್ ಉದ್ಯೋಗಾವಕಾಶ ಕಡಿಮೆಯಾದಂದಿನಿಂದ ಅಭ್ಯರ್ಥಿಗಳನ್ನು ಕಳೆದುಕೊಳ್ಳಲಾರಂಭಿಸಿರುವ ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿ, ಉಪಯೋಗವಿಲ್ಲದೆ ಹಾಳಾಗುತ್ತಿರುವ ತರಬೇತಿ ಸಾಮರ್ಥ್ಯ ಸರ್ಕಾರಕ್ಕೆ ಚಿಂತೆಯನ್ನುಂಟು ಮಾಡಿದೆ.

‘ಪಾಲಿಟೆಕ್ನಿಕ್‌ಗಳಲ್ಲಿರುವ ಅಧ್ಯಯನ ವಿಷಯಗಳನ್ನು ನಾವು ಬದಲಿಸುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಪಾಲಿಟೆಕ್ನಿಕ್‌ಗಳನ್ನು ಬೇರೆ ತರಬೇತಿ ಸಂಸ್ಥೆಗಳಾಗಿ ಮಾರ್ಪಡಿಸುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !