ಇಂಜೆಕ್ಷನ್ ಕೊಟ್ಟು ಪತ್ನಿ ಕೊಲೆಗೆ ಯತ್ನ: ಸಹನಟ ಸೇರಿ ಇಬ್ಬರ ಬಂಧನ

ಮಂಗಳವಾರ, ಜೂನ್ 25, 2019
22 °C
* ಕೆ.ಆರ್.ಪುರ ಪೊಲೀಸರಿಂದ ಮಹಿಳೆ ರಕ್ಷಣೆ *

ಇಂಜೆಕ್ಷನ್ ಕೊಟ್ಟು ಪತ್ನಿ ಕೊಲೆಗೆ ಯತ್ನ: ಸಹನಟ ಸೇರಿ ಇಬ್ಬರ ಬಂಧನ

Published:
Updated:

ಬೆಂಗಳೂರು: ಎರಡನೇ ಪತ್ನಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೆ ಯತ್ನಿಸಿದ ಆರೋಪದಡಿ ಸಹನಟ ಶಬರೀಶ್ ಶೆಟ್ಟಿ (32) ಹಾಗೂ ಆತನ ಸ್ನೇಹಿತ ನವೀನ್‌ (19) ಎಂಬಾತನನ್ನು ಕೆ.ಆರ್‌.ಪುರ ಪೊಲೀಸರು ಬಂಧಿಸಿದ್ದಾರೆ.

‘ಕೋಲಾರದ ನಿವಾಸಿಯಾದ ಶಬರೀಶ್, ಕೆ.ಆರ್.ಪುರದ ಭಟ್ಟರಹಳ್ಳಿ ನಿವಾಸಿ ಪದ್ಮಶ್ರೀ (27) ಅವರನ್ನು 2016ರಲ್ಲಿ ಮದುವೆ ಆಗಿದ್ದ. ಸ್ನೇಹಿತರ ಜೊತೆಗೆ ಬುಧವಾರ ರಾತ್ರಿ ಮನೆಗೆ ನುಗ್ಗಿದ್ದ ಶಬರೀಶ್ ಹಾಗೂ ಆತನ ಸ್ನೇಹಿತರು ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು. 

‘ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಂಪನಿಯೊಂದರಲ್ಲಿ ಪದ್ಮಶ್ರೀ ಕೆಲಸ ಮಾಡುತ್ತಿದ್ದರು. ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಇತ್ತೀಚೆಗೆ ‘ಅರುಣ’ ಎಂಬ ಸಿನಿಮಾದಲ್ಲೂ ಆತ ನಟಿಸಿದ್ದ’ ಎಂದರು.

ಮೊದಲ ಮದುವೆ ವಿಷಯ ಮುಚ್ಚಿಟ್ಟಿದ್ದ: ‘ಆರೋಪಿ ಶಬರೀಶ್‌ನಿಗೆ ಈಗಾಗಲೇ ಒಂದು ಮದುವೆ ಆಗಿತ್ತು. ಪತ್ನಿ ಕೋಲಾರದಲ್ಲಿ ನೆಲೆಸಿದ್ದರು. ಆ ವಿಷಯ ಮುಚ್ಚಿಟ್ಟು ಆತ ಎರಡನೇ ಮದು ವೆಯಾಗಿದ್ದ. ಅದು ಪದ್ಮಶ್ರೀ ಅವರಿಗೆ ಗೊತ್ತಾಗಿ ಜಗಳ ಆಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

ಮಹಿಳೆ ರಕ್ಷಣೆ: ‘ಪತ್ನಿಯನ್ನು ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ ಶಬರೀಶ್, ಸ್ನೇಹಿತರ ಜೊತೆ ಮನೆಗೆ ನುಗ್ಗಿ ಪತ್ನಿಯ ಕೈ ಕಾಲುಗಳನ್ನು ಕಟ್ಟಿ ಹಾಕಿ ಇಂಜೆಕ್ಷನ್ ಕೊಟ್ಟಿದ್ದ’ ಎಂದು ಪೊಲೀಸರು ಹೇಳಿದರು.

‘ಪದ್ಮಶ್ರೀ ಚೀರಾಡುತ್ತಿದ್ದ ಧ್ವನಿ ಕೇಳಿದ್ದ ಸ್ಥಳೀಯರೊಬ್ಬರು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಮನೆಗೆ ಹೋಗಿ ಆರೋಪಿಗಳನ್ನು ವಶಕ್ಕೆ ಪಡೆದರು. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಿದರು’ ಎಂದು ಪೊಲೀಸರು ವಿವರಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !